Home Latest ಕೊಳಲಗಿರಿಯಲ್ಲಿ ಪಿಂಕ್ ಸೂಪರ್ ಮೂನ್ ವೀಕ್ಷಣೆ…!!

ಕೊಳಲಗಿರಿಯಲ್ಲಿ ಪಿಂಕ್ ಸೂಪರ್ ಮೂನ್ ವೀಕ್ಷಣೆ…!!

ಬ್ರಹ್ಮಾವರ: ಉಡುಪಿ ವಸಂತ ಕಾಲದ ಪರ್ವಕಾಲದಲ್ಲಿ ಪ್ರಸ್ತುತ 30% ಹೆಚ್ಚು ಪ್ರಕಾಶಮಾನವಾಗಿ ಕಾಣುವ ಪಿಂಕ್ ಸೂಪರ್ ಮೂನ್ ವೀಕ್ಷಣ ಕಾರ್ಯಕ್ರಮವನ್ನು ಕೊಳಲ ಗಿರಿಯ ವಿಹಂಗಮ ನೋಟ ಇರುವ ಪ್ರದೇಶವಾದ ಬ್ಯಾಂಕ್ ಆಫ್ ಬರೋಡ. ಬಳಿ. ಮಂಜುನಾಥ್ ಕುಲಾಲ್ ರವರ ಮನೆ ತಾರಸಿನ ಮೇಲೆ ಕಾರ್ಯಕ್ರಮ ವನ್ನು ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ. ಕೊಳಲಗಿರಿ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುಳುನಾಡಿನ ನವರೆಯಾದ ಆರ್ ಮನೋಹರವರ ಸಾಧನೆ ವಿಶ್ವ ಮನ್ನಣೆಗೆ ಪಡೆದು ದಾಖಲೆ ಹೊಂದಿದ ದೂರದರ್ಶಕದ ಮೂಲಕ. ಈ ಭಾಗದ ಜನರಿಗೆಪಿಂಕ್ ಸೂಪರ್ ಮೂನ್ ಇನ್ನಷ್ಟು ಹತ್ತಿರ ನೋಡುವ ಭಾಗ್ಯ ಕಲ್ಪಿಸಿರುವುದು. ಶ್ಲಾಘನೀಯ, ಎಂದು ಮನೋಹರವರ ಸಾಧನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಮಾಜ ಸೇವಕ. ಯುವಮುಂದಾಳು ಪ್ರಕಾಶ್ ಭಂಡಾರಿ, ಹಿರಿಯರಾದ ಜಯಶೆಟ್ಟಿ,ಬನ್ನಂಜೆ, ಸುರೇಂದ್ರ ಪೂಜಾರಿ, ರತ್ನಾಕರ ಮೊಗವೀರ, ಹಾವಂಜೆ,ತೌಡ ಪೂಜಾರಿ, ಮಂಜುನಾಥ್ ಕುಲಾಲ್,ಸುಂದರಪೂಜಾರಿ,ಕರ್ಜೆ ಕಾಲೇಜಿನ ಉಪನ್ಯಾಸಕ ರಾಜೇಶ್, ಮತ್ತು ಸಹ ಉಪನ್ಯಾಸಕರು ಜೊತೆಗಿದ್ದು ಹಾವಂಜೆ ಗ್ರಾಮ ಪಂಚಾಯತ್ ನ ಸಿಬ್ಬಂದಿ ಸದಾಶಿವ, ಕಾರ್ತಿಕ್ ಹೋಟೆಲ್ ಮಾಲಕರಾದ ಗೋಪಾಲ ಪೂಜಾರಿ, ದಿನೇಶ್ ನಾಯ್ಕ್ ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳಬೆಟ್ಟು. ರಾಜೇಶ್ ಪ್ರಭು ಪರ್ಕಳ, ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪೋಷಕರು. ಪಿಂಕ್ ಸೂಪರ್ ಮೂನ್ ಅನ್ನು ಬಹಳ ಹತ್ತಿರದಲ್ಲಿ ದೂರದರ್ಶಕದಲ್ಲಿ ನೋಡಿ ಕಣ್ತುಂಬಿ ಕೊಂಡರು,