ಕಾರ್ಕಳ: ಮುಂಡ್ಕೂರು ಗ್ರಾಮದ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ಪೂರ್ವಜರು ಆರಾಧಿಸಿಕೊಂಡು ಬಂದಂತಹ ಶ್ರೀ ಮಹಾದೇವಿ ಅಮ್ಮನವರ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಶ್ರೀ ನಾಗದೇವರ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಪುನಃ ಪ್ರತಿಷ್ಠಾ ಕಲಶಾಭಿಷೇಕವು ಏ. 01ರ ಬುಧವಾರ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ರಾಘವೇಂದ್ರ ಭಟ್ ಅವರ ನೇತೃತ್ವದಲ್ಲಿ ಕಡಂದಲೆ ವೇದಮೂರ್ತಿ ಶ್ರೀ ಸ್ಕಂದ ಪ್ರಸಾದ ಭಟ್‌ರವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಆಸ್ರಣ್ಣರವರ ಉಪಸ್ಥಿತಿಯಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಬೆಳಿಗ್ಗೆ ಮೀನಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ನಾಗದೇವರಿಗೆ ಪಂಚ ವಿಂಶತಿ ಕಲಶಾಧಿವಾಸ, ನಾಗಬಿಂಬ ಪ್ರತಿಷ್ಠೆ, ಪ್ರಾಯಶ್ಚಿತ್ತ ಹೋಮ, ಆಶ್ಲೇಷಾ ಬಲಿ, ಅಣ್ಣಪ್ಪ ಸ್ವಾಮಿಯ ಪ್ರತಿಷ್ಠೆ ಹಾಗೂ ವಿವಿಧ ದೇವತಾ ಕಾರ್ಯಗಳು ನಡೆದ ಬಳಿಕ ಶ್ರೀ ಮಹಾದೇವಿ ಅಮ್ಮನವರ ದರ್ಶನ ಸೇವೆ, ಮಹಾಪೂಜೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪಕ ಮತ್ತು ಶ್ರೀ ದೇವಿ ಪಾತ್ರಿ ಕೇಶವ ಅಂಚನ್, ಡಾ. ಸೋಂದಾ ಭಾಸ್ಕರ ಭಟ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಗದೀಶ ಶೆಟ್ಟಿ ಸಚ್ಚರಪರಾರಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೋರಿಬೆಟ್ಟು ಗುತ್ತು, ಸುಬೋಧ ಶೆಟ್ಟಿ ಸಚ್ಚರಪರಾರಿ, ಪದ್ಮನಾಭ ಶೆಟ್ಟಿ ಸಚ್ಚರಪರಾರಿ, ಜಗನ್ನಾಥ ಶೆಟ್ಟಿ ಸಚ್ಚೇರಿಗುತ್ತು, ಜಗದೀಶ ಶೆಟ್ಟಿ ನಡಿಗುತ್ತು, ಕಜೆ ಮಾರಿಗುಡಿ ಮಹಮ್ಮಾಯೀ ದೇಗುಲದ ಗೌರವಾಧ್ಯಕ್ಷ ಮಹಾಬಲ ಕರ್ಕೇರ, ಸುಚರಿತ ಶೆಟ್ಟಿ ಕಡಂದಲೆ ಪರಾರಿ, ಕೃಷ್ಣ ಪೂಜಾರಿ ಪಾಲಡ್ಕ, ಶ್ರೀಧರ ಸನಿಲ್, ಕೃಷ್ಣ ಪೂಜಾರಿ ಬಂಡ್ರೊಟ್ಟು, ಸಂತೋಷ್ ಕೇಶವ ಅಂಚನ್, ಕೃಷ್ಣ ಸಾಲ್ಯಾನ್ ಸಂಕಲಕರಿಯ, ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಹಾಗೂ ಊರ ಪರ ಊರಿನ ಭಕ್ತ ಮಹಾಶಯರು ಉಪಸ್ಥಿತರಿದ್ದರು.





