ಬ್ರಹ್ಮಾವರ : ಉಡುಪಿಜಿಲ್ಲೆಯಾದ್ಯoತ ನಿರಂತರವಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.
ಬ್ರಹ್ಮಾವರ ಭರಣಿ ಪೆಟ್ರೋಲ್ ಬಂಕ್ ಮುಂಭಾಗದ ಕಾಂಪ್ಲೆಕ್ಸ್ ಗಳಿಗೆ ನೀರು ನುಗ್ಗಿದೆ. ಮುಂಜಾನೆಯಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆರೆ ಸೃಷ್ಟಿಯಾಗಿದೆ ಎನ್ನಲಾಗಿದೆ.
ರಿಪೇರಿಗೆ ತಂದಿರಿಸಲಾಗಿದ್ದ ಕಾರುಗಳು, ದುಬಾರಿ ಉಪಕರಣಗಳು ನೀರಿನಲ್ಲಿ ಮುಳುಗುವ ಆತಂಕ ಸೃಷ್ಟಿಯಾಗಿದೆ. ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರವೇಶದಲ್ಲಿ ಇರುವ ಕಾಂಪ್ಲೆಕ್ಸ್ ಆಗಿದ್ದು, ಪ್ರತಿವರ್ಷವೂ ಕೂಡ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಇಲ್ಲಿ ಕೃತಕರೆ ಸಮಸ್ಯೆ ಉಂಟಾಗಿದೆ.
ಪ್ರತಿ ವರ್ಷವೂ ಮಳೆಗಾಲದಲ್ಲಿ ಕಣ್ಣಿದ್ದು ಕುರುಡರಂತೆ ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯವಸ್ಥೆ ವರ್ತಿಸುತ್ತಿದೆ. ಬೆಳಗಿನಿಂದ ನೆರೆಹಾವಳಿಯಿಂದ ಕಂಗೆಟ್ಟ ಗ್ಯಾರೇಜ್ ನೌಕರರು, ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.