Home Crime ಗಂಗೊಳ್ಳಿ : ದನ ಕಳವು ಯತ್ನ : ಇಬ್ಬರು ಪೊಲೀಸ್ ವಶಕ್ಕೆ….!!

ಗಂಗೊಳ್ಳಿ : ದನ ಕಳವು ಯತ್ನ : ಇಬ್ಬರು ಪೊಲೀಸ್ ವಶಕ್ಕೆ….!!

ಗಂಗೊಳ್ಳಿ : ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮೆಡಿಕಲ್ ಶಾಪ್ ಪಕ್ಕದಲ್ಲಿ ಮಲಗಿದ್ದ ದನ ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬ್ರಹ್ಮಾವರದ ಬೈಕಾಡಿಯ ನೌಫಲ (23) , ಕುಂದಾಪುರದ ಗುಲ್ವಾಡಿಯ ನಿಶಾದ್‌ (23) ಎಂದು ಗುರುತಿಸಲಾಗಿದೆ.

ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು ಹಾಗೂ 2 ಮೊಬೈಲ್‌ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜು.06 ರಂದು ಬೆಳಿಗ್ಗಿನ ಜಾವ 04:00 ಗಂಟೆಯ ಸುಮಾರಿಗೆ ನಾಡಾ ಗ್ರಾಮ ಪಂಚಾಯತ್‌ ಸಮೀಪ ಕಾರಿನಲ್ಲಿ ಬಂದ ಮೂವರು ಆರೋಪಿಗಳು ಮೆಡಿಕಲ್‌ ಪಕ್ಕದಲ್ಲಿ ಮಲಗಿದ್ದ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುತ್ತಿದ್ದರು. ಈ ವೇಳೆ ದಾರಿಯಲ್ಲಿನ ಬಂದ ವಾಹನವನ್ನು ನೋಡಿ ಓಡಿ ಹೋಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.