ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಮಹಿಳೆಯೊಬ್ಬರಿಗೆ ಸಂಸ್ಥೆಯಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಘಟನೆ ನಡೆದಿದೆ.
ಕುಂದಾಪುರದ ಮೊಳಹಳ್ಳಿ ನಿವಾಸಿ ಮಾಲತಿ ಎಂಬವರಿಗೆ ಆರೋಪಿ ಸುಶೀಲ ಎಂಬವರು ವಂಚನೆ ಮಾಡಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಂಶ : ಪಿರ್ಯಾದಿದಾರರಾದ ಮಾಲತಿ (40), ಮೊಳಹಳ್ಳಿ ಗ್ರಾಮ ಕುಂದಾಪುರ ಇವರಿಗೆ ಜನವರಿ 2022 ನೇ ತಿಂಗಳಿನಲ್ಲಿ ಆರೋಪಿ ಸುಶೀಲರವರು ತಾನು ಚಾಲೆಂಜಿಗ್ ಪೌಂಡೇಶನ್ ಸಂಸ್ಥೆಯವಳಾಗಿಯೂ ಅಲ್ಲದೇ ತಾನು ದಲಿತ ಸಂಘಟನೆಯ ಅಧ್ಯಕ್ಷಳಾಗಿರುವುದಾಗಿ ನಮ್ಮ ಸಂಸ್ಥೆಯಲ್ಲಿ 1,60,000/- ಡೆಪಾಸಿಟ್ ಇಟ್ಟಲ್ಲಿ ರೂಪಾಯಿ 16,00,000/- ಸಿಗುವುದಾಗಿ ಅದರಲ್ಲಿ 8 ಲಕ್ಷ ಸಬ್ಸಿಡಿ ಸಿಗುವುದಾಗಿ ನಂಬಿಸಿ ಪಿರ್ಯಾದಿದಾರರಿಂದ 1,60,000/- ರೂ ಹಣವನ್ನುಪಡೆದುಕೊಂಡಿರುತ್ತಾರೆ ನಂತರ ಇದರಲ್ಲಿ GST ಹಣ ಕಡಿತಗೊಳ್ಳುತ್ತದೆ ಇನ್ನೂ ಹೆಚ್ಚು ಹಣ ನೀಡಬೇಕು ಎಂದು ತಿಳಿಸಿದ ಮೇರೆಗೆ ಪಿರ್ಯಾದಿದಾರರು ತನ್ನಲ್ಲಿಈಗ ಹಣ ಇಲ್ಲ ಎಂದು ತಿಳಿಸಿದ ಮೇರೆಗೆ ನಿನ್ನಲ್ಲಿರುವ ಚಿನ್ನಾಭರಣಗಳನ್ನು ನೀಡುವಂತೆಯೂ ಅದನ್ನು ತನ್ನ ಹೆಸರಿನಲ್ಲಿ ಅಡಮಾನವಿರಿಸಿ ಸಾಲ ಪಡೆದು ಸಂಸ್ಥೆಗೆ ಕಟ್ಟುವುದಾಗಿ ಆ ಬಳಿಕ 16,00,000/- ಸಾಲ ದೊರೆತ ಬಳಿಕ ಚಿನ್ನಾಭರಣಗಳನ್ನು ಬಿಡಿಸಬಹುದು ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ 20 ಗ್ರಾಂ ತೂಕದ ಒಂದು ಚಿನ್ನದ ಕರಿಮಣಿ ಸರ, 4 ಗ್ರಾಂ ತೂಕದ ಉಂಗುರ , 31 ಗ್ರಾಂ ತೂಕದ ಹವಳದ ಸರವನ್ನು ಪಡೆದುಕೊಂಡು ವಾಪಾಸ್ಸು ನೀಡದೇ ಇದ್ದು ,ವಿಚಾರಿಸಿದಾಗ ತಾನು ತನ್ನ ಸ್ನೇಹಿತರಾದ ಶ್ರೀಧರ ಹಾಗೂ ಗಣೇಶ್ ರವರ ಹೆಸರಿನಲ್ಲಿ ಬ್ರಹ್ಮಾವರದ ರಾಮಕೃಷ್ಣ ಸೊಸೈಟಿ ಹಾಗೂ ಎಮ್ ಸಿ ಸಿ ಸೊಸೈಟಿಯಲ್ಲಿ ಅಡಮಾನವಿರಿಸಿರುವುದಾಗಿ ತಿಳಿಸಿರುತ್ತಾಳೆ. ಇಲ್ಲಿಯ ತನಕ ಆರೋಪಿ ಸುಶೀಲ ಲೋನ್ ಕೊಡಿಸದೇ ಇರುವುದರಿಂದ ಅನುಮಾನಗೊಂಡು ಹಣ ಕೊಡುವಂತೆ ಇಲ್ಲದಿದ್ದರಿಂದ ಚಿನ್ನವನ್ನು ನೀಡುವಂತೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಹೇಳಿ ನಿಮ್ಮ ವಿರುದ್ದ ಕೇಸು ದಾಖಲಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ.
ಪಿರ್ಯಾದಿದಾರರಿಗೆ 16,00,000/- ಲೋನ್ ಕೊಡಿಸುವುದಾಗಿ ನಂಬಿಸಿ 1,60,000 ಹಣವನ್ನು ಹಾಗೂ 2,70,000/- ಮೌಲ್ಯದ 55 ಗ್ರಾಂ ಚಿನ್ನಾಭರಣಗಳನ್ನು ಪಡೆದು ಹಾಗೂ ವಂಚನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2025 ಕಲಂ:318(2), 318(3), 318(4), 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.