Home Karkala News ಕಾರ್ಕಳ: ನಿಯಂತ್ರಣ ತಪ್ಪಿ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದು ಯುವಕ ಸಾವು

ಕಾರ್ಕಳ: ನಿಯಂತ್ರಣ ತಪ್ಪಿ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದು ಯುವಕ ಸಾವು

ಕಾರ್ಕಳ, ಮಾ.27: ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಹೊಸೊಕ್ಲು ನೆಲೆಬೈಲು ಎಂಬಲ್ಲಿ ಟ್ರಾಕ್ಟರ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಸುಂದರ ಪೂಜಾರಿ ಅವರ ಗದ್ದೆಯಲ್ಲಿ ಭತ್ತದ ಪಿಂಡಿ ಮಾಡುವ ಕೆಲಸ ನಡೆಯುತ್ತಿದ್ದ ವೇಳೆ, K-14 TB-8801 ಸಂಖ್ಯೆಯ ಟ್ರಾಕ್ಟರ್ ಅನ್ನು ಶ್ರೀಧರ ಎಂಬಾತ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದಾಗ ಆತನಿಂದ ನಿಯಂತ್ರಣ ತಪ್ಪಿ ಟ್ರಾಕ್ಟರ್‌ನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಟ್ರಾಕ್ಟರ್‌ನ ಹಿಂಭಾಗದ ಯಂತ್ರ ಭಾಗ ತಲೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಎಸ್. ಜೀವನ್ (25), ಸುಬ್ರಹ್ಮಣ್ಯ ಅವರ ಪುತ್ರ, ಯಿಹೊಳೆ ಅಂಚೆ ಹೊಸೂರು ಅಗಸಹಳ್ಳಿ, ಶಿವಮೊಗ್ಗ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.