ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ವ್ಯಕ್ತಿಯೊಬ್ಬರು ತೆಂಗಿನಕಾಯಿ ಕೊಯ್ಯುವ ವೇಳೆಯಲ್ಲಿ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ರಾಜೇಶ್ ಎಂದು ತಿಳಿಯಲಾಗಿದೆ.
ಮೃತ ರಾಜೇಶ್ ಅವರು ಚಿತ್ತೂರು ಗ್ರಾಮದ ಮಾರಣಕಟ್ಟೆಯ ಮಹಾಬಲೇಶ್ವರ ಎಂಬವರ ಮನೆಯಲ್ಲಿ ತೆಂಗಿನ ಕಾಯಿ ಕೊಯ್ಯುವಾಗ ಈ ಘಟನೆ ಸಂಭವಿಸಿದೆ.
ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಅಂಬಿಕಾ ರವರ ಚಿಕ್ಕಪ್ಪ ರಾಜೇಶ (47 ವರ್ಷ) ಇವರು ಹೆಂಡತಿ ಮಗನೊಂದಿಗೆ ವಾಸವಾಗಿದ್ದು, ಕೃಷಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 13/05/2025 ರಂದು ಬೆಳಿಗ್ಗೆ ಸುಮಾರು 09:00 ಗಂಟೆಗೆ, ಚಿತ್ತೂರು ಗ್ರಾಮದ ಮಾರಣಕಟ್ಟೆಯ ಮಹಾಬಲೇಶ್ವರ ಎಂಬವರ ಮನೆಯ ತೆಂಗಿನ ಮರದಿಂದ ರಾಜೇಶ ರವರು ತೆಂಗಿನ ಕಾಯಿ ಕೊಯ್ಯುವ ಸಮಯ, ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು, ಅವರ ಕುತ್ತಿಗೆಗೆ ಒಳಜಖಂ ಹಾಗೂ ದೇಹದ ಇತರೆ ಅಂಗಾಂಗಗಳಿಗೆ ಒಳ ಪೆಟ್ಟು ಗಾಯವಾಗಿ, ಕುಂದಾಪುರ ಸರಕಾರಿ ಆಸ್ಪತ್ರೆ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 06/07/2025 ರಂದು ಬೆಳಿಗ್ಗೆ ಜಾವ 5:08 ಗಂಟೆಗೆ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.