Home Crime ಮುಲ್ಕಿ ಪೊಲೀಸರ ಕಾರ್ಯಾಚರಣೆ : ಕಲಿ ಯೋಗೀಶನ ಸಹಚರ ಸೆರೆ…!!

ಮುಲ್ಕಿ ಪೊಲೀಸರ ಕಾರ್ಯಾಚರಣೆ : ಕಲಿ ಯೋಗೀಶನ ಸಹಚರ ಸೆರೆ…!!

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ‌ಮರೆಸಿಕೊಂಡಿದ್ದ ಭೂಗತ ಪಾತಕಿ‌ ಕಲಿ ಯೋಗೀಶನ ಸಹಚರನೋರ್ವನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮುಲ್ಕಿ ಚಿತ್ರಾಪು ನಿವಾಸಿ ಶ್ರೀನಿವಾಸ್ ಶೆಟ್ಟಿ ಆಲಿಯಾಸ್ ಸೀನು (45) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈತ ಕಳೆದ 8 ವರ್ಷಗಳಿಂದ ದಸ್ತಗಿರಿಗೆ ಸಿಗದೆ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ಈತನ‌ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಈತನ ವಿರುದ್ಧ ಮೈಸೂರು ಪ್ರಿನ್ಸಿಪಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು.‌

ಈತನ ಪತ್ತೆಗಾಗಿ ಪಣಂಬೂರು ಉಪ‌ವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶ್ರೀಕಾಂತ್ ಅವರು ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಬಿ.ಎಸ್.‌ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಉಮೇಶ್ ಕುಮಾರ್ ಎಂ.ಎನ್‌.‌, ಎಎಸ್ಸೈ ಸುರೇಶ್ ಕುಂದರ್, ಹೆಡ್ ಕಾನ್ಸ್ಟೇಬಲ್ ಉದಯ ಅವರ ತಂಡವನ್ನು ರಚಿಸಿತ್ತು.

ಆರೋಪಿಯು ಮುಂಬೈನಲ್ಲಿರುವ ಬಗ್ಗೆ ಖಚಿತ ಮಾಹಿತಿ‌ ಕಲೆ ಹಾಕಿಕೊಂಡ ಪೊಲೀಸ್‌ ತಂಡ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.