Home Karavali Karnataka ಹೆಜಮಾಡಿ ಟೋಲ್ ಗೇಟ್ ನ ಜನ ವಿರೋಧಿ ನೀತಿ ಹಾಗೂ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಹೋರಾಟ...

ಹೆಜಮಾಡಿ ಟೋಲ್ ಗೇಟ್ ನ ಜನ ವಿರೋಧಿ ನೀತಿ ಹಾಗೂ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಹೋರಾಟ ಅನಿವಾರ್ಯ : ಚೇತನ್ ಪಡುಬಿದ್ರಿ ಕರವೇ…!!

ಉಡುಪಿ : ಹೆಜಮಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಂಕ ವಸುಲಾತಿ ಕೇಂದ್ರ (ಟೋಲ್ ಗೇಟ್) ದ ಅಧಿಕಾರಿಗಳು ಸ್ಥಳೀಯರಿಂದ ಸುಂಕ ವಸೂಲಿ ಮಾಡುವುದು ಸೇರಿದಂತೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತಿದ್ದಾರೆ. ಇದರ ಬಗ್ಗೆ ಸಂಘಟನೆಗೆ ಹಲವಾರು ದೂರುಗಳು ಬಂದಿರುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕಾಪು ತಾಲೂಕು ಅಧ್ಯಕ್ಷರಾದ ಚೇತನ್ ಪಡುಬಿದ್ರಿ ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳೊಂದಿಗೆ ಮೌಖಿಕವಾಗಿ ಎಷ್ಟೇ ಬಾರಿ ಚರ್ಚಿಸಿದರೂ ಸಮಸ್ಯೆ ಪರಿಹಾರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೆದ್ದಾರಿಯ ಹೆಜಮಾಡಿ ಪರಿಸರದಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಹಾಗೂ ನಮ್ಮ ಸಂಘಟನೆ ಹಲವಾರು ವರ್ಷಗಳಿಂದ ಮನವಿ ಮಾಡಿದ್ದರೂ ಆ ಮನವಿಗೆ ಯಾವುದೇ ರೀತಿ ಸ್ಪಂದನೆಯನ್ನು ನೀಡುತ್ತಿಲ್ಲ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಹಲವಾರು ಬಾರಿ ಸಭೆ ನಡೆದು ಜಿಲ್ಲಾಧಿಕಾರಿಗಳು ಯಥಾ ಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರೂ ಸಹ ಜಿಲ್ಲಾಧಿಕಾರಿಗಳ ಆದೇಶಕ್ಕೂ ಕಂಪೆನಿ ಹಾಗೂ ಅಧಿಕಾರಿಗಳು ಕ್ಯಾರೆನ್ನುತ್ತಿಲ್ಲ. ಕಂಪೆನಿ ಹಾಗೂ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಹಾಗೂ ದಬ್ಬಾಳಿಕೆ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕಾಪು ತಾಲೂಕು ಅಧ್ಯಕ್ಷರಾದ ಚೇತನ್ ಪಡುಬಿದ್ರಿ ಅವರು ಎಚ್ಚರಿಕೆ ನೀಡಿರುತ್ತಾರೆ.

ಸಾಸ್ತಾನದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಟೋಲ್ ವಿನಾಯಿತಿ ಇದೆ. ಆದರೆ ಹೆಜಮಾಡಿಯಲ್ಲಿ ಮಾತ್ರ ಗ್ರಾಮ ವ್ಯಾಪ್ತಿಗೆ ಟೋಲ್ ವಿನಾಯಿತಿ ಇದೆ.ಒಂದೇ ಜಿಲ್ಲೆಯಲ್ಲಿ ಎರಡು ಟೋಲ್ ಇದ್ದು ಜಿಲ್ಲೆಯ ಜನರಿಗೆ ಒಂದು ಕಣ್ಣಿಗೆ ಬೆನ್ನೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಪ್ರಯತ್ನವನ್ನು ಕಂಪನಿ ಮಾಡುತ್ತಿದೆ. ಸಾಸ್ತಾನದಲ್ಲಿ ಜಿಲ್ಲಾ ಪಂಚಾಯಿತಿಗೆ ಟೋಲ್ ವಿನಾಯಿತಿ ಕೊಟ್ಟ ಹಾಗೆ ಪಡುಬಿದ್ರಿ ಜಿಲ್ಲಾ ಪಂಚಾಯಿತ್ ವ್ಯಾಪ್ತಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿ ಬರುತ್ತಿದೆ.