ಉಡುಪಿ: ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆಯಾದ ಘಟನೆ ನಡೆದಿದೆ.
ವಂಚನೆಯಾದ ವ್ಯಕ್ತಿ ಶಿವಶಂಕರ್ ಎಂದು ತಿಳಿಯಲಾಗಿದೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಶಿವಶಂಕರ ಇವರು ದಿನಾಂಕ 18/02/2025 ರಂದು ಫೇಸ್ ಬುಕ್ ನ್ನು ವೀಕ್ಷಿಸುತ್ತಿರುವಾಗ Free-Trading ಇರುವ ವೆಬ್ ಸೈಟ್ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿದಾಗ Nuvama Wealth Dream ಎಂಬ ಟ್ರೇಡಿಂಗ್ ವೆಬ್‌ಸೈಟ್ ತೆರೆದಿದ್ದು ಅದರಲ್ಲಿ ಎಲ್ಲಾ ವಿವರಗಳನ್ನು ನೀಡಿ ಲಾಗಿನ್ ಆಗಿದ್ದು, ನಂತರ ಪಿರ್ಯಾದಿದಾರರನ್ನು “Nuvama Wealth Dream “ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಗೆ ಸೇರಿಸಿದ್ದು, ಅದರಲ್ಲಿ ದಿನಾಲೂ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಿದ್ದರ ಬಗ್ಗೆ ಸಂದೇಶಗಳನ್ನು ಹಾಕುತ್ತಿದ್ದು, ದಿನಾಂಕ 01/03/2025 ರಂದು ಪಿರ್ಯಾದಿದಾರರ ವಾಟ್ಸಪ್ ಗೆ ಯಾರೋ ಅಪರಿಚಿತ ವ್ಯಕ್ತಿಯು ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದೆಂದು ನಂಬಿಸಿ ಪಿರ್ಯಾದಿದಾರರ ಖಾತೆಯಿಂದ ಆರೋಪಿತರ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 7 ಲಕ್ಷ ರೂಪಾಯಿಗಳನ್ನು ದಿನಾಂಕ 19/05/2025 ರಿಂದ ದಿನಾಂಕ 26/05/2025 ರವರ ನಡುವೆ ವರ್ಗಾವಣೆ ಮಾಡಿದ್ದು, ಆರೋಪಿಗಳು ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದೆಂದು ನಂಬಿಸಿ ವಂಚನೆ ಮಾಡಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2025, ಕಲಂ: 318(2) BNS 66(D) IT act ರಂತೆ ಪ್ರಕರಣ ದಾಖಲಾಗಿರುತ್ತದೆ.