ನನ್ನಂತೆ ಆಗುವುದು ಕಡಿಮೆ ಆಗಲಿ : ಸೆಲ್ಫಿ ವಿಡಿಯೋ ಮಾಡಿಟ್ಟ 25ರ ಯುವಕ ಆತ್ಮಹತ್ಯೆ….
ದಾವಣಗೆರೆ : ಆನ್ ಲೈನ್ ಗೇಮ್ ಆಡಿ ಬರೋಬ್ಬರಿ 18 ಲಕ್ಷ ರೂ.ಹಣ ಕಳೆದುಕೊಂಡು ನೊಂದಿದ್ದ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸರಸ್ವತಿ ನಗರದಲ್ಲಿ ನಡೆದಿದೆ.
ಶಶಿ ಕುಮಾರ್ (25) ಬಲಿಯಾದ ಯುವಕನಾಗಿದ್ದು, ನಷ್ಟ ಅನುಭವಿಸಿದ ಬಳಿಕ ಆನ್ ಲೈನ್ ಗೇಮ್ ನಿಷೇಧ ಮಾಡುವಂತೆ ಪ್ರಧಾನಿ, ಮುಖ್ಯಮಂತ್ರಿ, ಸಂಸದೆ, ಡಿಸಿ, ಎಸ್ ಪಿ ಸೇರಿ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದ. ಯಾವುದೇ ಕ್ರಮವಾಗದ ಹಿನ್ನಲೆ ಸೆಲ್ಫಿ ವಿಡಿಯೋ ಮಾಡಿ ಕಠಿನ ನಿರ್ಧಾರ ತಳೆದಿದ್ದಾನೆ.
ಡೆತ್ ನೋಟ್ ಬರೆದಿದ್ದು , ಆನ್ ಲೈನ್ ಗೇಮ್ ನ ಅಕ್ರಮದ ಬಗ್ಗೆ ಹೇಳಿಕೊಂಡಿದ್ದಾನೆ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವುದು ಕಡಿಮೆಯಾಗಲಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.