ಬ್ರಹ್ಮಾವರ: ಉಡುಪಿ ಜಿಲ್ಲೆಯ ಬಾರ್ಕೂರು ದೇವಸ್ಥಾನದ ಮುಕ್ತೇಶ್ವರರೊಬ್ಬರು ನಾಗನಕಟ್ಟೆಗೆ ಪೂಜೆ ಮಾಡಲು ಹೋದಾಗ ಕೆಲವು ಮಂದಿ ಸೇರಿ ಅವರಿಗೆ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಹಲ್ಲೆಗೊಳಗಾದವರು ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಮುಕ್ತೇಶ್ವರರಾದ ದಿನೇಶ್ ಎಂದು ತಿಳಿದು ಬಂದಿದೆ.
ಹಲ್ಲೆ ಮಾಡಿದ ಆರೋಪಿಗಳು ಸೂರ್ಯನಾರಾಯಣ (65) 2. ನೇತ್ರಾವತಿ (62) 3. ಮಹೇಶ್ (40) 4. ರಜೇಶ್ (36) 5. ಶಿಲ್ಪಾ (35) 6. ರೂಪಾ (30) 7. ರಶ್ಮೀ (27) ಎಂದು ಗುರುತಿಸಲಾಗಿದೆ.
ಪ್ರಕರಣದ ಸಾರಾಂಶ : ಕಚ್ಚೂರು ಗ್ರಾಮದ ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಅನುವಂಶಿಕ ಗ್ರಾಮ ಮುಕ್ತೇಶ್ವರರು ಆದ ಫಿರ್ಯಾದಿ ದಿನೇಶ್ (65) ಇವರು ದಿನಾಂಕ 29.04.2025 ರಂದು ಮಧ್ಯಾಹ್ನ 12:30 ಗಂಟೆಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಭಕ್ತರೊಂದಿಗೆ ದೇವಸ್ಥಾನದ ಮೂಲ ನಾಗನಕಟ್ಟೆಗೆ ನಿತ್ಯ ಪೂಜೆ ಮಾಡಲು ಹೋದಾಗ ಆರೋಪಿತ 1.ಸೂರ್ಯನಾರಾಯಣ (65) 2. ನೇತ್ರಾವತಿ (62) 3. ಮಹೇಶ್ (40) 4. ರಜೇಶ್ (36) 5. ಶಿಲ್ಪಾ (35) 6. ರೂಪಾ (30) 7. ರಶ್ಮೀ (27) ಎಲ್ಲರೂ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ, ಬಾಕೂರು ಅಂಚೆ, ಕಚ್ಚೂರು ಗ್ರಾಮ ಇವರುಗಳು ಸದ್ರಿ ದೇವಸ್ಥಾನದ ಸ್ವಾಧೀನತೆಯಲ್ಲಿದ್ದ ಸರ್ವೆ ನಂಬ್ರ 9/43 ರಲ್ಲಿ 0.04 ಸೆಂಟ್ಸ್ ಸ್ಥಳವನ್ನು ಅತಿಕ್ರಮಿಸಿ ಜಿ.ಐ ತಗಡುಶೀಟುಗಳನ್ನು ಅಡ್ಡವಾಗಿ ಇರಿಸಿಕೊಂಡು ತಡೆಮಾಡಿ ಫಿರ್ಯಾದಿದಾರರು ಮತ್ತು ಅವರ ಜೊತೆಯಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಡ್ಡ ಕಟ್ಟಿದ್ದು ಅಲ್ಲದೇ, ಎಲ್ಲಾರು ಒಟ್ಟಿಗೆ ಸೇರಿ ಫಿರ್ಯಾದಿದಾರರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ, ಕಲ್ಲುಗಳನ್ನು ಎಸೆದಿದ್ದು, ಆಗ ಒಂದು ಕಲ್ಲು ಫಿರ್ಯಾದಿದಾರರ ಎಡ ಕಣ್ಣಿನ ಮೇಲ್ಭಾಗಕ್ಕೆ ತಾಗಿ ರಕ್ತ ಗಾಯವಾಗಿ ಅವರು ತಲೆ ತಿರುಗಿ ಬಿದ್ದಿರುತ್ತಾರೆ. ನಂತರ ಗಾಯಗೊಂಡ ಫಿರ್ಯಾದಿದಾರರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 146/2025 ಕಲಂ: 117, 126, 329, 352, 351 BNS ನಂತೆ ಪ್ರಕರಣ ದಾಖಲಾಗಿರುತ್ತದೆ.