ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ 12 ವರ್ಷಗಳಿಂದ ಕ್ಷೇತ್ರದ ದಿಡುಂಬನಾಗಿ ಸೇವೆ ಸಲ್ಲಿಸುತ್ತಿದ್ದ ಎಲ್ಲರ ಅಚ್ಚು ಮೆಚ್ಚಿನ ಬಸವ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಪಶು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಭಕ್ತರೊಬ್ಬರು 6 ವರ್ಷ ಪ್ರಾಯದ ಬಸವನನ್ನು ದಾನವಾಗಿ ನೀಡಿದ್ದರು.ಇದಕ್ಕೆ ಕೃಷ್ಣ (18) ಎಂದು ಹೆಸರಿಡಲಾಗಿತ್ತು. ಅನಾರೋಗ್ಯದ ಹಿನ್ನೆಲೆ ಎಂಟು ದಿನಗಳ ಹಿಂದೆ ಮಂಗಳೂರಿನ ಪಶುವೈದ್ಯಾಲಯಕ್ಕೆ ದಾಖಲಿಸಿದ್ದು, ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆರಂಭದಲ್ಲಿ ಆರೋಗ್ಯದಲ್ಲಿ ಕೊಂಚ ಸುಧಾರಣೆಗೊಂಡರೂ ಕೊನೆ ಯುಸಿರೆಳೆದಿದೆ.
ದೇವಸ್ಥಾನದ ಆಡಳಿತ ಹಾಗೂ ವೈದಿಕ ವೃಂದದ ಮೂಲಕ ಭಕ್ತರು ಸೇರಿ ಸಾಂಪ್ರದಾಯಿಕ ಅಂತಿಮ ವಿಧಾನಗಳು ಕೇತ್ರದ ಎದುರಿನ ಗದ್ದೆಯಲ್ಲಿ ಅಂತ್ಯಕ್ರಿಯೆ ನಡೆಯಿತು.