Home Crime ಮಣಿಪಾಲ : ರಸ್ತೆ ಅಪಘಾತ : ಬಸ್ಸಿನ ಚಕ್ರದಡಿಗೆ ಮಹಿಳೆಯೊಬ್ಬರು ಸಿಲುಕಿ ಮೃತ್ಯು…!!

ಮಣಿಪಾಲ : ರಸ್ತೆ ಅಪಘಾತ : ಬಸ್ಸಿನ ಚಕ್ರದಡಿಗೆ ಮಹಿಳೆಯೊಬ್ಬರು ಸಿಲುಕಿ ಮೃತ್ಯು…!!

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರಿಗೆ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದು ಅದರ ಪರಿಣಾಮ ಅವರ ರಸ್ತೆಗೆ ಎಸೆಯಲ್ಪಟು ಖಾಸಗಿ‌ ಬಸ್ಸಿನ ‌ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆ ಮಣಿಪಾಲದ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವಿನೋದಾ ಶೇರ್ವೆಗಾರ್ ಎಂದು ತಿಳಿದು ಬಂದಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.