Home Crime ವ್ಯಕ್ತಿಯೊಬ್ಬರು ನಾಪತ್ತೆ…!!

ವ್ಯಕ್ತಿಯೊಬ್ಬರು ನಾಪತ್ತೆ…!!

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌoಡ್ 4ನೇ ಕ್ರಾಸ್‌ನ ನಿವಾಸಿ ಮಂಜುನಾಥ್ ಎಂ.ಡಿ (45) ಎಂಬ ವ್ಯಕ್ತಿಯು ಮಾರ್ಚ್ 11 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

168 ಸೆಂ.ಮೀ ಎತ್ತರ, ಸಾಮಾನ್ಯ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.