ಉಡುಪಿ: ಜಾಗತಿಕ ಫ್ಯಾಟಿ ಲಿವರ್ ದಿನಾಚರಣೆಯ ಅಂಗವಾಗಿ, ಉಡುಪಿಯ ಆದರ್ಶ ಆಸ್ಪತ್ರೆಯ ವತಿಯಿಂದ ಲಿವರ್ ಹೆಲ್ತ್ ಸ್ಕ್ರೀನಿಂಗ್ ಶಿಬಿರವನ್ನು ಜೂನ್ 13, 2025 ರಂದು ಆಯೋಜಿಸಲಾಗಿದೆ. ಶಿಬಿರವು ಶುಕ್ರವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಲಿವರ್ ಆರೋಗ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಡಾ. ಸತೀಶ್. ಕೆ. ನಾಯಕ್ (ಗ್ಯಾಸ್ಟ್ರೋಎಂಟರಲಾಜಿಸ್ಟ್) ಪ್ರಮುಖವಾಗಿ ಭಾಗವಹಿಸಲಿದ್ದಾರೆ.
ಸ್ಥಳ: ಆದರ್ಶ ಆಸ್ಪತ್ರೆ, ಉಡುಪಿ.
ಮಾಹಿತಿ ಮತ್ತು ಲಭ್ಯವಿರುವ ತಪಾಸಣೆಗಳು:
ಲಿವರ್ ಫಂಕ್ಷನ್ ಟೆಸ್ಟ್ (LFT)
ಹೆಪಟೈಟಿಸ್ ಬಿ ಟೆಸ್ಟ್ (HBsAg)
ಹೆಪಟೈಟಿಸ್ ಸಿ ಟೆಸ್ಟ್ (HCV)
ಫ್ಯಾಟಿ ಲಿವರ್ ಸ್ಕ್ರೀನಿಂಗ್
ಡಯಟ್ ಸಲಹೆಗಳು
ಉಚಿತ ತಪಾಸಣೆ ಮತ್ತು ಸಲಹೆಗಳು ಈ ಶಿಬಿರದ ವಿಶೇಷತೆ.
ಆಸಕ್ತ ನಾಗರಿಕರು ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಲಿವರ್ ಆರೋಗ್ಯದ ಮಹತ್ವ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅರಿತುಕೊಳ್ಳುವ ಅವಕಾಶವನ್ನು ಬಳಸಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 0820 2702100-109 / 9663330864