Home Latest ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು, ಉದ್ಯಮಿ ಬಿ.ಗುಣರಂಜನ್ ಶೆಟ್ಟಿಯವರ...

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ, ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು, ಉದ್ಯಮಿ ಬಿ.ಗುಣರಂಜನ್ ಶೆಟ್ಟಿಯವರ ಹುಟ್ಟು ಹಬ್ಬ…!!

ಉಡುಪಿ : ಜಯ ಕರ್ನಾಟಕ ಜನಪರ ವೇದಿಕೆಯ
ಸಂಸ್ಥಾಪಕ , ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು , ಅಖಿಲ ಭಾರತ ಬೀಚ್ ರೆಸ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷರೂ , ದಕ್ಷಿಣ ಭಾರತ ಕುಸ್ತಿ ಸಂಘದ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರು ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಉದ್ಯಮಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾ.20 ರಂದು ಸಾಲಿಗ್ರಾಮ ಪರಂಪಳ್ಳಿಯ ಹೊಸಬದುಕು ಆಶ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಉಡುಪಿ ಜಿಲ್ಲೆ ಘಟಕದ ಸದಸ್ಯರು ಆಚರಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಘಟಕಾಧ್ಯಕ್ಸರು ಜನನಿ ದಿವಾಕರ ಶೆಟ್ಟಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಅಲ್ಬಾಡಿ . ಪ್ರಭಾಕರ್ . ಲೋಕೇಶ್ ಕೋಟೇಶ್ವರ ಮತ್ತು ಇನ್ನಿತರ ಸದ್ಯಸರು ಉಪಸ್ಥಿತಿಯಿದ್ದರು … ಹೊಸಬದುಕು ಆಶ್ರಮ ವಾಸಿಗಳೊಂದಿಗೆ ದೀಪ ಬೆಳಗಿಸಿ ಕೇಕ್ ಕತ್ತರಿಸುದೊಂದಿಗೆ ಕಾರ್ಯಕ್ರಮ ನೆರವೇರಿತು . ಈ ದಿನದ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು .. ಆಶ್ರಮವಾಸಿಗಳ ಆರೋಗ್ಯ ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು.