ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ರಾಮಚಂದ್ರ ನಾಯ್ಕ್ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಪಿರ್ಯಾದುದಾರ ಸಂದೀಪ್, (25) ತಂದೆ: ರಾಮಚಂದ್ರ ನಾಯ್ಕ್, ವಾಸ: 6-39 D/1 ಸಿಕ್ವೇರಾ ಕಾಲೋನಿ, ಮರ್ಣೆ ಇವರ ತಂದೆ ರಾಮಚಂದ್ರ ನಾಯ್ಕ್(50)ರವರು ಅತಿಯಾದ ಮದ್ಯಪಾನ ಸೇವನೆ ಚಟವನ್ನು ಹೊಂದಿದ್ದು, ದಿನಾಂಕ: 08.03.2026 ರಂದು ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದು, ದಿನಾಂಕ: 09.03.2026 ರಂದು ಪಿರ್ಯಾದುದಾರರು ಬೆಳಿಗ್ಗೆ 5.00 ಗಂಟೆಗೆ ಎದ್ದು ಮನೆಯಲ್ಲಿ ನೋಡಿದಾಗ ತಂದೆಯವರು ಕಾಣಿಸದೇ ಇದ್ದು, ನಂತರ ಹುಡುಕಾಡುವ ಬಗ್ಗೆ ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಿರುತ್ತಾರೆ ಮತ್ತು ಈ ಹಿಂದೆಯೂ ಕೂಡ ತಂದೆಯವರು ಕಾಣೆಯಾಗಿ ಮತ್ತೆ ಮನೆಗೆ ಮರಳಿ ಬಂದಿರುತ್ತಾರೆ. ಪಿರ್ಯಾದುದಾರರು ಹಾಗೂ ಸಂಬಂದಿಕರು ರಾಮಚಂದ್ರ ನಾಯ್ಕ್ ರವರ ಪತ್ತೆ ಕಾರ್ಯದಲ್ಲಿರುವಾಗ ದಿನಾಂಕ: 11.03.2026 ರಂದು ಬೆಂಜಮಿನ್ ಬ್ಯಾಪ್ಟಿಸ್ಟ್ ಸಿಕ್ವೇರಾ ರವರ ಜಾಗದ ಭಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುದಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣಾ ಯು.ಡಿ.ಆರ್ ಕ್ರಮಾಂಕ: 12/2026 ಕಲಂ: 194 ಬಿಎನ್ಎಸ್ಎಸ್ ರಂತೆ ಪ್ರಕರಣ ದಾಕಲಿಸಲಾಗಿದೆ



