ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್
ಗೆ ಮೀಸಲಿದ್ದ ಸ್ಥಳದಲ್ಲಿ ರೀಲ್ಸ್ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಯುವತಿಯೋರ್ವಳು ಜೀವ ಕಳೆದುಕೊಂಡ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತಪಟ್ಟ ಯುವತಿ ಶಾಪಿಂಗ್ ಮಾರ್ಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ನಂದಿನಿ ಎಂದು ತಿಳಿದು ಬಂದಿದೆ.
ಯುವತಿ ಸ್ನೇಹಿತರೊಂದಿಗೆ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು. ಆದರೆ ರೀಲ್ಸ್ ಮಾಡುವಾಗ ತಾನು ಎಲ್ಲಿ ಇದ್ದೇನೆ ಎನ್ನುವುದು ಮರೆತ್ತಿದ್ದ ನಂದಿನಿ ಕಟ್ಟಡದ ಬರೋಬ್ಬರಿ 13ನೇ ಅಂತಸ್ತಿನ ಮೇಲಿನಿಂದ ಕೆಳಗೆ ಬಿದ್ದಿದ್ದಾಳೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ಗಾಗಿ ಬಿಡಲಾಗಿದ್ದ ಸ್ಥಳದಲ್ಲಿ ಮೇಲಿನಿಂದ ಕೆಳಗೆ ಬಿದ್ದು ಯುವತಿ ಜೀವ ಬಿಟ್ಟಿದ್ದಾಳೆ.
ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಮೃತ ನಂದಿನಿಯ 12 ವರ್ಷದ ಪ್ರೀತಿ ಫೇಲ್ಯೂರ್ ಆಗಿತ್ತು. ಹೀಗಾಗಿ ಅದೇ ಫೀಲಿಂಗ್ ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಹೋಗಿದ್ದಳು. ಈ ವೇಳೆ ಮದ್ಯಪಾನ ಕುಡಿದು ಸ್ಯಾಡ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ನಂದಿನಿ ಜೀವ ಬಿಟ್ಟಿದ್ದಾಳೆ.
