ಹಿರಿಯಡ್ಕ, ಮಾ.16: ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಂಪಳ್ಳಿ ಗ್ರಾಮ ಉಡುಪಿ ನಿವಾಸಿ ರಾಜೇಶ್ ನಾಯ್ಕ್ (27) ಅವರು ತಮ್ಮ ಅಣ್ಣ ಗಣೇಶ ನಾಯ್ಕ್ (31) ಅವರ ಸಾವಿನ ಬಗ್ಗೆ ದೂರು ನೀಡಿದ್ದಾರೆ.
ಗಣೇಶ ನಾಯ್ಕ್ ಅವರು ವಿಪರೀತವಾಗಿ ಮದ್ಯಪಾನ ಮಾಡುವ ಚಟ ಹೊಂದಿದ್ದು, ಯಾವುದೋ ವಿಚಾರಕ್ಕೆ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ದಿನಾಂಕ 14/03/2026 ರಂದು ರಾತ್ರಿ ಸುಮಾರು 10:00 ಗಂಟೆಗೆ ಊಟ ಮಾಡಿದ ಬಳಿಕ ತಮ್ಮ ಕೋಣೆಯಲ್ಲಿ ಮಲಗಿಕೊಂಡಿದ್ದರು.
ಆದರೆ 15/03/2026 ರಂದು ಬೆಳಿಗ್ಗೆ ಸುಮಾರು 9:30 ಗಂಟೆಯಾದರೂ ಅವರು ಕೋಣೆಯಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬದವರು ಕೋಣೆಯ ಪಕ್ಕದ ಗೋಡೆಯನ್ನು ಹತ್ತಿ ನೋಡಿದಾಗ, ಕೋಣೆಯಲ್ಲಿದ್ದ ಮರದ ಜಂತಿಗೆ ಬೆಡ್‌ಶೀಟ್ ಕವರನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



