Home Art & Culture ಬಿಡುಗಡೆಗೂ ಮುನ್ನ ಭರ್ಜರಿ ಸದ್ದು‌ ಮಾಡುತ್ತಿರುವ “ಜೈ” ಚಿತ್ರ…!!

ಬಿಡುಗಡೆಗೂ ಮುನ್ನ ಭರ್ಜರಿ ಸದ್ದು‌ ಮಾಡುತ್ತಿರುವ “ಜೈ” ಚಿತ್ರ…!!

ಮಂಗ‌ಳೂರು : ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ‘ಜೈ’ ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಮಾಡಿದ್ದಾರೆ. ವಿದೇಶದಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈಗ ‘ಜೈ’ ಚಿತ್ರದ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಭೇಷ್ ಎಂದಿದ್ದಾರೆ.

ರೂಪೇಶ್ ಶೆಟ್ಟಿ ಅಭಿನಯದ ‘ಜೈ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತುಳು ಮತ್ತು ಕನ್ನಡದಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾ ತೆರೆ ಕಾಣುವುದಕ್ಕೂ ಮೊದಲೇ ಭರ್ಜರಿ ಸದ್ದು ಮಾಡುತ್ತಿದೆ.

‘ಜೈ’ ಚಿತ್ರದ ಅಂತಾರಾಷ್ಟ್ರೀಯ ಪ್ರೇಮಿಯರ್ ಶೋ ಇತ್ತೀಚೆಗೆ ನಡೆಯಿತು. ಅಲ್ಲಿ ಸಿನಿಮಾ ನೋಡಿದ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಅಕ್ಟೋಬರ್ 24ರಂದು ಮಸ್ಕಟ್ ನಲ್ಲಿ ಮೊದಲ ಪ್ರೇಮಿಯರ್ ನಡೆಯಿತು.

ಆ ಬಳಿಕ ಗೋವಾದಲ್ಲಿ ಅಕ್ಟೋಬರ್ 26ರಂದು ‘ಜೈ’ ಸಿನಿಮಾದ ಇಂಡಿಯನ್ ಪ್ರೇಮಿಯರ್ ನಡೆಯಿತು. ವೀಕ್ಷಕರಿಂದ ‘ಜೈ’ ಸಿನಿಮಾಗೆ ಪ್ರಶಂಸೆ ಸಿಕ್ಕಿದೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ.

ಇಷ್ಟೇ ಅಲ್ಲದೇ ಬಹರೈನ್, ಕತಾರ್, ದುಬೈನಲ್ಲಿ ಪ್ರೇಮಿಯರ್ ನಡೆಯಲಿದೆ. ನವೆಂಬರ್ 14ರಂದು ವಿಶ್ವದಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ರೂಪೇಶ್ ಶೆಟ್ಟಿ ಫ್ಯಾನ್ಸ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ, ಸುನೀಲ್ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅದ್ವಿತಿ ಶೆಟ್ಟಿ, ಅರವಿಂದ್ ಬೋಳಾರ್, ದೇವದಾಸ್ ಕಾಪಿಕಾಡ್,ಪ್ರಸನ್ನ ಶೆಟ್ಟಿ ಬೈಲೂರು ಮುಂತಾದವರು ನಟಿಸಿದ್ದಾರೆ. ಟೀಸರ್ ಗಮನ ಸೆಳೆದಿದೆ.