Home Crime ಕುಂದಾಪುರ : ಚಿಲ್ಲರೆ ವಿಚಾರಕ್ಕೆ ಮೆಡಿಕಲ್ ಸಿಬ್ಬಂದಿಗೆ ಹಲ್ಲೆ : ಮಹಿಳೆ ಅರೆಸ್ಟ್…!!

ಕುಂದಾಪುರ : ಚಿಲ್ಲರೆ ವಿಚಾರಕ್ಕೆ ಮೆಡಿಕಲ್ ಸಿಬ್ಬಂದಿಗೆ ಹಲ್ಲೆ : ಮಹಿಳೆ ಅರೆಸ್ಟ್…!!

ಕುಂದಾಪುರ : ಚಿಲ್ಲರೆ ವಿಷಯಕ್ಕೆ ಮಾವಿನಕಟ್ಟೆ ಮೆಡಿಕಲ್ ಶಾಪ್ ನ ಯುವತಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಮಹಿಳೆಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಯಾಸ್ಮೀನ್ ಬಂಧಿತ ಆರೋಪಿ. ಮೆಡಿಕಲ್ ನಲ್ಲಿ ಜೂ.9ರಂದು ಔಷಧಿ ಖರೀದಿಸಿದ ಯಾಸ್ಮಿನ್, 500 ರೂ. ಚಿಲ್ಲರೆ ವಿಚಾರದಲ್ಲಿ ಮೆಡಿಕಲ್‌ನ ಉದ್ಯೋಗಿ ಯುವತಿ ಜೊತೆ ಗಲಾಟೆ ಮಾಡಿದ್ದರು. ಬಳಿಕ ಯಾಸ್ಮೀನ್ ಯುವತಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ನಡೆಸಿದ್ದಾರೆಂದು ದೂರಲಾಗಿದೆ.

ಈ ಕುರಿತ ಸಿಸಿಟಿವಿ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿತ್ತು. ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.