ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಎರ್ಲಪಾಡಿ ಗ್ರಾಮದ ಜಾರ್ಕಳದ ಸರಕಾರಿ ಸ್ಥಳದಲ್ಲಿ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್‌ರವರು ಠಾಣಾ ಸಿಬ್ಬಂದಿಯವರಾದ ಹೆಚ್‌ಸಿ. ಗೋಪಾಲಕೃಷ್ಣ, ಪಿಸಿ, ಗಜ ನಾಯ್ಕ್‌ರೊಂದಿಗೆ ದಾಳಿ ನಡೆಸಿದ್ದು, ಕಲ್ಲುಕೋರೆ ಸ್ಥಳವನ್ನು ಪರಿಶೀಲಿಸಿದಾಗ ರಮೇಶ್ ಶೆಟ್ಟಿ ಎಂಬವರ ಸೂಚನೆಯಂತೆ ಯಾವುದೇ ಪರವಾನಿಗೆ ಹೊಂದದೇ ಸ್ವಂತ ಲಾಭಕ್ಕಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ.
ಆಪಾದಿತರಾದ ರಮೇಶ್ ಶೆಟ್ಟಿ, ರಾಜೇಶ, ರಾಜ, ದುರ್ಗೇಶ, ಗೋಪಾ ನಾಯರ್, ಶಿವರಾಜ್, ಸುಬ್ರಹ್ಮಣ್ಯ, ರವಿ, ಚೆಲುವ, ರವಿ, ಚಿನ್ನು, ರಾಜ ಎಂಬವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



