Home Karnataka News ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ,ಕರಾವಳಿ ಸಮಾಚಾರ ಮಾಸ...

ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ,ಕರಾವಳಿ ಸಮಾಚಾರ ಮಾಸ ಪತ್ರಿಕೆ ಸಂಪಾದಕ ಶ್ರೀ ಅರ್ಜುನ್ ಮಲ್ಯ ಆಯ್ಕೆ…!!

ಭಟ್ಕಳ : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರಾಗಿ ಭಟ್ಕಳದ ಪತ್ರಕರ್ತ,ಕರಾವಳಿ ಸಮಾಚಾರ ಮಾಸ ಪತ್ರಿಕೆ ಸಂಪಾದಕ ಶ್ರೀ ಅರ್ಜುನ್ ಮಲ್ಯ ಆಯ್ಕೆಯಾಗಿದ್ದಾರೆ.

ಕಾ.ನಿ.ಪ ಧ್ವನಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ ನಾಯ್ಕ್ ಅವರ ಸೂಚನೆ ಮತ್ತು ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ದೈವಜ್ಞ ಅವರ ಅನುಮೋದನೆಯ ಮೇರೆಗೆ ಅರ್ಜುನ ಮಲ್ಯ ಅವರನ್ನು ನೂತನವಾಗಿ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷರನ್ನಾಗಿ ರಾಜ್ಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಕರ್ತರ ಹಿತಾಸಕ್ತಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಹಾಗೂ ವಸ್ತುನಿಷ್ಠ ವರದಿಗಾರಿಕೆಗೆ ಪ್ರೋತ್ಸಾಹಿಸುತ್ತದೆ. ಈಗಾಗಲೇ ರಾಜ್ಯದ 27 ಜಿಲ್ಲೆಗಳಲ್ಲಿ ಸಂಘದ ಘಟಕಗಳಿದ್ದು , ರಾಜ್ಯದ 200 ಕ್ಕೂ ಹೆಚ್ಚು ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಬಲವಾಗಿದೆ. ನೂತನ ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ಮಲ್ಯ ಜಿಲ್ಲೆಯ ಪತ್ರಕರ್ತರ ನೈಜ ಧ್ವನಿಯಾಗಿ ಕಾರ್ಯನಿರ್ವಹಿಸುವಂತೆ ಕಾ.ನಿ.ಪ ಧ್ವನಿ ಸಂಘದ ರಾಜ್ಯ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಬಂಗ್ಲೆ ತಿಳಿಸಿದ್ದಾರೆ.ನೂತನವಾಗಿ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಅರ್ಜುನ್ ಮಲ್ಯ ಅವರಿಗೆ ಅಂಕೋಲಾ ತಾಲೂಕು ಅಧ್ಯಕ್ಷ ಮಾರುತಿ .ಎಚ್, ಮುಂಡೆಗೊಡ್ ತಾಲೂಕು ಅಧ್ಯಕ್ಷ ಸಂತೋಷ್ ದೈವಜ್ಞ, ಶಿರಸಿ ತಾಲೂಕು ಅಧ್ಯಕ್ಷ ರಾಜೇಶ ಮೊಗೇರ್ ಮತ್ತು ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಆಚಾರ್ಯ ಸಿರ್ಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.