ಉಚ್ಚಿಲ, ಫೆ.28: ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣದ ಸಲುವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭ ಪ್ರಯುಕ್ತ ಬ್ರಹತ್ ಸಮಾವೇಶ ಹಾಗೂ ಬೈಕ್ ಜಾಥಾ (Raally)”.ದಿನಾಂಕ : 01-03-2026 (ಅದಿತ್ಯವಾರ) ನಡೆಯಲಿದ್ದು ಸಭಾ ಕಾರ್ಯಕ್ರಮ : ಬೆಳಗ್ಗೆ ಗಂಟೆ 10.30 ರಿಂದ ಸ್ಥಳ : ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣ, ಉಚ್ಚಿಲ,ದಲ್ಲಿ ಆಯೋಜಿಸಲಾಗಿದೆ
ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ 9 ತಲೆಮಾರಿನ ಗುರುಗಳು ಸಮಾಜದ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇವರ ಪೈಕಿ ಮಾರ್ಚ್ 31, 1966ರಂದು ಕೀರ್ತಿಶೇಷರಾಗಿರುವ ಸದ್ರಿ ಗುರುಪರಂಪರೆಯ ಕೊನೆಯ ಗುರುಗಳೂ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸ್ಥಾಪಕರೂ ಆಗಿರುವ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಪ್ರತಿಮೆಯನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಿಚಾರ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಸಂದರ್ಭದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದ ಪ್ರಕಾರ, ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ವ ಸಮಾಜ ಭಾಂಧವರ ಸಹಕಾರದಿಂದ ದೇವಸ್ಥಾನದ ಆವರಣದಲ್ಲಿ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪುತ್ಥಳಿ ಪ್ರತಿಷ್ಠಾಪಣೆಯು ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದ್ದು, ಈ ಪುಣ್ಯ ಕಾರ್ಯಕ್ಕೆ ಎಲ್ಲಾ ಮೊಗವೀರ ಸಮಾಜ ಬಾಂಧವರು ತಮ್ಮ ಶಕ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ “ಸಾಂಕೇತಿಕವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭದ ಸಲುವಾಗಿ ಬೃಹತ್ ಸಮಾವೇಶ ಹಾಗೂ ಯುವ ಭಾಂದವರಿಗಾಗಿ ದ್ವಿಚಕ್ರ ವಾಹನ ಜಾಥಾ (Bike Rally)” ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಬೃಹತ್ ಸಮಾವೇಶ:-ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರುವರೆಗಿನ ಒಟ್ಟು 336 ಮೊಗವೀರ ಗ್ರಾಮ ಸಭೆ ಹಾಗೂ ಕೂಡುಕಟ್ಟು ಸೇರಿದಂತೆ ದೇಶ- ವಿದೇಶಗಳಲ್ಲಿರುವ ಮೊಗವೀರ ಸಂಘಟನೆಗಳ ಒಟ್ಟು 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಮಾಜ ಭಾಂಧವರು ಭಾಗವಹಿಸಲಿದ್ದಾರೆ.
ಬೃಹತ್ ದ್ವಿಚಕ್ರ ವಾಹನ ಜಾಥಾ :-ಈ ಮಹತ್ವದ ಕಾರ್ಯಕ್ರಮದ ಅಂಗವಾಗಿ ಮೊಗವೀರ ಸಮಾಜದ ಯುವಭಾಂದವರಿಗಾಗಿ ಭವ್ಯವಾದ ದ್ವಿಚಕ್ರ ವಾಹನ ರ್ಯಾಲಿಯನ್ನು ಆಯೋಜಿಸಿದ್ದಾರೆ.
ದ್ವಿಚಕ್ರ ವಾಹನ ಜಾಥಾ ಹೊರಡುವ ಸಮಯ :- ಬೆಳಿಗ್ಗೆ ಗಂಟೆ 9.30ಕ್ಕೆ ಸಾಗುವ ಮಾರ್ಗ
ಶ್ರೀ ಕ್ಷೇತ್ರ ಉಚ್ಚಿಲದ ಉತ್ತರ ಭಾಗದಲ್ಲಿರುವ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಾಂಗಳ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆವರಣದಿಂದ ಹಾಗೂ ದಕ್ಷಿಣ ಭಾಗದಲ್ಲಿರುವ ಹೆಜಮಾಡಿ ಟೋಲ್ ಪ್ಲಾಜಾದಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನವರೆಗೆ ಸುಮಾರು 2000 ದ್ವಿಚಕ್ರ ವಾಹನಗಳು ಭಾಗವಹಿಸುವ ನಿರೀಕ್ಷೆಯಿದ್ದು, ಶಿಸ್ತುಬದ್ಧವಾಗಿ ಮತ್ತು ಸಂಚಾರ ನಿಯಮಗಳನ್ನು ಪಾಲಿಸಿಕೊಂಡು ವಾಹನ ಜಾಥಾ ನಡೆಸಲಾಗುವುದು.
ಗುರು ಪಾದ ಕಾಣಿಕೆ ಸಮರ್ಪಣೆಗೆ ಪ್ರತ್ಯೇಕ ವ್ಯವಸ್ಥೆ :-
ದೇವಸ್ಥಾನದ ಮುಂಭಾಗದಲ್ಲಿ ಗುರುಗಳ ಪುತಳಿ ನಿರ್ಮಾಣವಾಗುತ್ತಿದ್ದು ಆ ಜಾಗದಲ್ಲಿ ಗುರುಗಳ ಚಿನ್ನ ಲೇಪಿತ ಪಾದುಕೆಯನ್ನು ಇಡಲು ಉದ್ದೇಶಿಸಲಾಗಿದ್ದು ಅದೇ ಜಾಗದಲ್ಲಿ ಸಮಾಜ ಭಾಂಧವರು ಪಾದ ಕಾಣಿಕೆ ಸಮರ್ಪಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಈ ಕಾರ್ಯಕ್ರಮವು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ, ನಾಡೋಜ ಡಾ. ಜಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸಮಾಜದ ಗಣ್ಯ ನಾಯಕರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣದಂತಹ ಈ ಐತಿಹಾಸಿಕ ಹಾಗೂ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ, ಗುರುಪಾದ ಕಾಣಿಕೆ ಸಮರ್ಪಿಸುವ ಮೂಲಕ ಶ್ರೀ ದೇವಿ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪುತ್ಥಳಿ ನಿರ್ಮಾಣ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದೆ.
ಕಾರ್ಯಕ್ರಮದ ವಿವರ:
ಬೆಳಿಗ್ಗೆ : 9.00 ಗಂಟೆಗೆ
ಉತ್ತರದಿಂದ- ಪಾಂಗಾಳ ಶ್ರೀ ಜನಾರ್ಧನ ದೇವಸ್ಥಾನದಿಂದ ಪ್ರಾರಂಭ
ದಕ್ಷಿಣದಿಂದ- ಹೆಜಮಾಡಿ ಟೋಲ್ ಗೇಟ್ ನಿಂದ ಪ್ರಾರಂಭ
ಬೆಳಿಗ್ಗೆ : 10.00 ಗಂಟೆಗೆ ಸರಿಯಾಗಿ ಗುರುಪಾದ ಸಮರ್ಪಣಾ ಕಾರ್ಯಕ್ರಮ ಆರಂಭ
ಬೆಳಿಗ್ಗೆ : 11.15 ಗಂಟೆಗೆ ಸಭಾ ಕಾರ್ಯಕ್ರಮ: ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ವೇದಿಕೆ
ಈ ಸಮಾರಂಭದಲ್ಲಿ 500ಕ್ಕಿಂತ ಅಧಿಕ ಯುವಕರಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ
ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರದ ಆಯೋಜನೆ
ಪತ್ರಿಕಾ ಘೋಷ್ಠಿಯಲ್ಲಿ ನಾಡೋಜ ಡಾ| ಜಿ. ಶಂಕರ್, ಗೌರವ ಸಲಹೆಗಾರರು, ದ.ಕ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಜಯ ಸಿ. ಕೋಟ್ಯಾನ್, ಅಧ್ಯಕ್ಷರು, ದ.ಕ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಮೋಹನ್ ಬೆಂಗ್ರೆ, ಉಪಾಧ್ಯಕ್ಷರು, ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಗಿರಿಧರ್ ಸುವರ್ಣ, ಕ್ಷೇತ್ರಾಧ್ಯಕ್ಷರು, ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಮನೋಜ್ ಸಾಲ್ಯಾನ್, ಕಾರ್ಯಾಧ್ಯಕ್ಷರು, ಕುಲಗುರುಗಳ ಕಂಚಿನ ಪುತ್ಥಳ ನಿರ್ಮಾಣ ಸಮಿತಿ ಶರಣ್ ಕುಮಾರ್ ಮಟ್ಟು, ಪ್ರ| ಕಾರ್ಯದರ್ಶಿ, ದ.ಕ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ರತ್ನಾಕರ್ ಸಾಲಿಯಾನ್, ಮಲ್ಪೆ, ಕೋಶಾಧಿಕಾರಿ, ದ.ಕ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ,ಸತೀಶ್ ಅಮೀನ್ ಬೆಣ್ಣೆಕುದ್ರು, ಬಾರ್ಕೂರು ಹೋಬಳ ಉದಯ ಕುಮಾರ್ ಹಟ್ಟಿಯಂಗಡಿ, ಬಗ್ವಾಡಿ ಹೋಬಳ ರವೀಶ್ ಎಸ್. ಕೊರವಡಿ, ಅಧ್ಯಕ್ಷರು ಮೊಗವೀರ ಯುವ ಸಂಘಟನೆ (ರಿ.) ಉಡುಪಿ ದಿನೇಶ್ ಎರ್ಮಾಳ್, ಕೋಶಾಧಿಕಾರಿ, ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಭಾಗವಹಿಸಿದರು
ಈ ಸಂದರ್ಭದಲ್ಲಿ ವಿನಯ ಕರ್ಕೇರ ಮಲ್ಪೆ, ಅಧ್ಯಕ್ಷರು, ದಸರಾ ಸಮಿತಿ ಉಚ್ಚಿಲ,ಸುಜಿತ್ ಸಾಲ್ಯಾನ್, ಮುಲ್ಕಿ, ಜೊತೆ ಕಾರ್ಯದರ್ಶಿ, ದ.ಕ. ಮೊಗವೀರ ಮಹಾಜನ ಸಂಘ (ರಿ.) ಗುಂಡು ಬಿ. ಅಮೀನ್, ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ ಉಚ್ಚಿಲ,ವಾಸುದೇವ ಸಾಲ್ಯಾನ್, ನಿಕಟಪೂರ್ವ ಕ್ಷೇತ್ರಾಡಳಿತ ಅಧ್ಯಕ್ಷರು,ಸುಧಾಕರ್ ಕುಂದರ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ದ.ಕ ಮೊಗವೀರ ಮಹಾಜನ ಸಂಘ ರಾಜೇಶ್ ಪುತ್ರನ್ ಉಳ್ಳಾಲ, ಅಧ್ಯಕ್ಷರು ಮಂಗಳೂರು ವಲಯ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಲೋಕೇಶ್ ಸುವರ್ಣ ಕುದ್ರೋಳಿ, ಅಧ್ಯಕ್ಷರು ಮಂಗಳೂರು ಏಳುಪಟ್ಟ ಸಂಯುಕ್ತ ಸಭಾ ಪವನ್ ಆನಂದ್ ಎರ್ಮಾಳ್ ತೆಂಕ, ಅಧ್ಯಕ್ಷರು, ಮಧ್ಯ ವಲಯ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಯಜೇಶ್ ಕರ್ಕೇರ ಮಿತ್ರಪಟ್ಟ, ಸಂಚಾಲಕರು, ಮಧ್ಯ ವಲಯ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಸತೀಶ್ ಕುಂದರ್ ಮಲ್ಲೆ, ಅಧ್ಯಕ್ಷರು, ಉಡುಪಿ ವಲಯ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿ ಉಪಸ್ಥಿತರಿದ್ದರು



