Home Crime ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ..!!

ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ..!!

ಶಿರ್ವ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿರುವ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಬಡಿಕೇರಿ ಹೌಸ್, ಬೆಳಪು ಗ್ರಾಮದ ನಿವಾಸಿ ಬಿ ಚಂದ್ರಶೇಖರ ರಾವ್ (54) ಕಾಣೆಯಾದ ವ್ಯಕ್ತಿಯಾಗಿದ್ದಾರೆ. ಇವರ ಅಣ್ಣ ಬಿ ಗೋಪಾಲಕೃಷ್ಣ ಅವರು ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಂದ್ರಶೇಖರ ರಾವ್ ಅವರು ಅವಿವಾಹಿತರಾಗಿದ್ದು, ಸುಮಾರು ಐದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ದೇರಳಕಟ್ಟೆಯ ನಿಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಮಾರ್ಚ್ 25ರಂದು ಬೆಳಿಗ್ಗೆ ಸುಮಾರು 7:30 ಗಂಟೆ ವೇಳೆಗೆ ಮನೆಯಿಂದ ಕಪ್ಪು ಪ್ಯಾಂಟ್ ಹಾಗೂ ಅರ್ಧ ತೋಳಿನ ಬಿಳಿ ಶರ್ಟ್ ಧರಿಸಿ, KA-20-2652 ಸಂಖ್ಯೆಯ ಸ್ಕೂಟರ್‌ನಲ್ಲಿ ಅಯ್ಯಪ್ಪನಗರದಿಂದ ಬೆಳಪು ಕಡೆಗೆ ತೆರಳಿದ್ದು, ನಂತರ ಮನೆಗೆ ಮರಳಿ ಬಂದಿಲ್ಲ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2026 ಅಡಿಯಲ್ಲಿ ‘ಗಂಡಸು ಕಾಣೆ’ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.