ಉಡುಪಿ: ನಗರದಲ್ಲಿ IPL T20 ಕ್ರಿಕೆಟ್ ಮ್ಯಾಚ್ಗೆ ಸಂಬಂಧಪಟ್ಟಂತೆ, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ದೊರತು ಸೆನ್ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಆನಂತ ಮತ್ತು ಅವರ ಪತ್ನಿ ವಾಣಿಶ್ರೀ ಎಂಬವರ ಶಾಪ್ ಗೆ ದಾಳಿ ನಡೆಸಿ ಅವರ ಬಳಿ ಇದ್ದ ಮೊಬೈಲ್ ಗಳನ್ನು ಸೆನ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಮತ್ತು ಅವರ ತಂಡ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ :ದಿನಾಂಕ 03/06/2025 ರಂದು ರಾಮಚಂದ್ರ ನಾಯಕ್, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರಿಗೆ ಶಿವಳ್ಳಿ ಗ್ರಾಮದ ಪಿ.ಪಿ.ಸಿ ಕಾಲೇಜು ಬಳಿ ಇರುವ ಶಕ್ತಿಶೀ ಎಂಬಲ್ಲಿ ಎಂ. ರಾವ್ ಎಂಬುವವರ ಬಾಡಿಗೆ ಮನೆಯಲ್ಲಿ LORDSEXCH ಎಂಬ ಕ್ರಿಕೆಟ್ ಬೆಟ್ಟಿಂಗ್ ವೈಬ್ ಸೈಟ್ ಮುಖಾಂತರ ತನ್ನಲ್ಲಿರುವ Oppo Campany F27 Pro Plus 5G ಫೋನ್ ಮೂಲಕ ಅಹಮದಾಬಾದ್ ನಲ್ಲಿ ನರೇಂದ್ರಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ PBKS (ಪಂಜಾಬ್ ಕಿಂಗ್ಸ್ ) RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್ಗೆ ಸಂಬಂಧಪಟ್ಟು, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ದೊರಕಿದ್ದು ಸ್ಥಳಕ್ಕೆ ಹೋಗಿ ನೋಡಲಾಗಿ ಅನಂತ ಪಿ ಎಂಬಾತ ಆಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡವನ್ನು ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಹಾಗೂ ಆತನು ಸಿದ್ದಾರ್ಥ ಎಂಟರ್ ಪ್ರೈಸಸ್ ಎಂಬವರಿಂದ ಪಡೆದ LORDSEXCH ಎಂಬ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಆಡಲು ಯೂಸರ್ ಐಡಿ ಹಾಗೂ ಪಾಸ್ವರ್ಡ ಪಡೆದು ನಂತರ ಪಾಸ್ ವರ್ಡ್ ನ್ನು ತನಗೆ ಬೇಕಾದಂತೆ ಬದಲಾಯಿಸಿಕೊಂಡು ವಾಟ್ಸ್ಪ್ ಚಾಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣವನ್ನು ನೀಡುವ ಒಪ್ಪಿಗೆಯ ಮೇರೆಗೆ ಪಂಥವನ್ನು ಸ್ವೀಕರಿಸಿದ್ದು, ಅದನ್ನು ಸಿದ್ದಾರ್ಥ ಎಂಟರ್ ಪ್ರೈಸಿಸ್ ಎಂಬ ಸ್ಥಂಸ್ಥೆಯ ಬ್ಯಾಂಕ್ ಖಾತೆ ಹಾಗೂ ಪೋನ್ ಪೇ ಮೂಲಕ ಹಣವನ್ನು ಪಣವಾಗಿಟ್ಟುಕೊಂಡಿದ್ದು, ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರವನ್ನು ಮಾಡಲು ತನ್ನ ಉಡುಪಿ ಮೈತ್ರಿ ಕಾಂಪ್ಲೇಕ್ಸ್ ಬ್ರಾಂಚ್ ನ ಎಸ್.ಬಿ.ಐ, ಬ್ಯಾಂಕ್ ಖಾತೆ ಬಳಕೆ ಮಾಡಿದ್ದು, ಅದರಿಂದ ಹಣವನ್ನು ಪಣವಾಗಿಟ್ಟ ಇತರರಿಗೆ ಬರಬೇಕಾದ ಲಾಭಾಂಶದ ಹಣ ಪಡೆಯಲು ಆತನ ಪತ್ನಿ ವಾಣಿಶ್ರೀ ರವರ ಉಡುಪಿ ಮೈತ್ರಿ ಕಾಂಪ್ಲೇಕ್ಸ್ ಬ್ರಾಂಚ್ ನ ಎಸ್.ಬಿ.ಐ, ಬ್ಯಾಂಕ್ ಖಾತೆಯನ್ನು ಬಳಕೆ ಮಾಡಿರುವುದಾಗಿದೆ. ಅನಂತ ಮತ್ತು ಆತನ ಪತ್ನಿ ವಾಣಿಶ್ರೀ ಇವರ ತಲಾ 1 ಮೊಬೈಲ್ ಪೋನ್ ಒಟ್ಟು 2 ಮೊಬೈಲ್ ಪೋನ್ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಕ್ರಮಾಂಕ 24/2025 ಕಲಂ: 78 KP ACTಮತ್ತು112 BNS ರಂತೆ ಪ್ರಕರಣ ದಾಖಲಾಗಿರುತ್ತದೆ.