Home Kundapura News ಕುಂದಾಪುರ : ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

ಕುಂದಾಪುರ : ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

ಕುಂದಾಪುರ : ಕಸಬಾ ಗ್ರಾಮದ ಶಾಸ್ತ್ರಿ ಪಾರ್ಕ್ ಸಮೀಪ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.

ಗೋದಿ ಮೈ ಬಣ್ಣದ ಸುಮಾರು 55 ಆಡಿ ಎತ್ತರವಿದ್ದು, ಬಾಯಿ ತೆರೆದಿದ್ದು ಬಾಯಲ್ಲಿ ನೀರೂರಿಸುವ ವಾಂತಿ ಮಾಡಿದ ಸ್ಥಿತಿಯಲಿ ಕಂಡು ಬಂದಿರುತ್ತದೆ, ಕಣ್ಣು ಆರೆ ತೆರೆದಿರುತ್ತದೆ, ಸಪೂರ ಶರೀರ ತಿಳಿ ಆಕಾಶ ನೀಲಿ. ಬಣ್ಣದ ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬಿಳಿ ಕಪ್ಪು ಗೆರೆ ಇರುವ ಶಾಲ್ ಮತ್ತು ಕಪ್ಪು ಬಣ್ಯದ ನೈಟ್ ಪ್ಯಾಂಟ್ ಧರಿಸಿದ್ದು ಕಪ್ಪು ತಲೆ ಕೂದಲು ಹಾಗೂ ಕಪ್ಪು ಮೀಸೆ ಇರುತ್ತದೆ, ಮೃತ ಶರೀರದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯಗಳು ಇರುವುದು ಕಂಡು ಬಂದಿರುವುದಿಲ್ಲ.

ಸದ್ರಿ ವ್ಯಕ್ತಿಯು ಯಾವುದೋ ಆನಾರೋಗ್ಯದ ಕಾರಣದಿಂದ ಅಥವಾ ಹೃದಯ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ, ಆದ್ದರಿಂದ ಮೃತನ ವಾರಿಸುದಾರರನ್ನು ಪತ್ತೆ ಮಾಡುವ ಬಗ್ಗೆ, ಹಾಗೂ ಮೃತದೇಹದ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಕೋರಿಕೆಯಾಗಿರುತ್ತದೆ.

ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ರಂತೆ ಪ್ರಕರಣ ದಾಖಲಾಗಿದೆ. ಸದ್ರಿ ವ್ಯಕ್ತಿಯ ವಾರೀಸುದಾರರು ಯಾರಾದರೂ ಇದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.