Home Art & Entertainment ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ…!!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ…!!

ಉದಯಪುರ : ದೀರ್ಘ ಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವಾಗಿದ್ದಾರೆ. ದಕ್ಷಿಣ ಭಾರತದ ಈ ಸಿನಿಮಾ ತಾರೆಯರು ಉದಯಪುರದಲ್ಲಿ ಮದುವೆಯಾಗಿದ್ದಾರೆ. ಉದಯಪುರದ ಐಷಾರಾಮಿ ಹೋಟೆಲ್ ರೆಸಾರ್ಟ್‌ನಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ.

ವಿಜಯ್‌ ದೇವರಕೊಂಡ ಹಂಚಿಕೊಂಡ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ಕಣ್ಣೀರಿಟ್ಟಿದ್ದನ್ನು ನೋಡಬಹುದು. ವಿಜಯ್‌ ತಾಳಿಕಟ್ಟುವ ವೇಳೆ ಭಾವುಕವಾಗಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿರುವ ರಶ್ಮಿಕಾ ಸಂತಸವನ್ನು ಕಣ್ಣಿನ ಮೂಲಕ ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಇಂದು ಉದಯಪುರದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂಧ್ರ ಮತ್ತು ಕೊಡವ ಸಂಪ್ರದಾಯದಂತೆ ಐಷಾರಾಮಿ ಹೋಟೆಲ್ ಐಟಿಸಿ ಮೆಮೆಂಟೋಸ್‌ನಲ್ಲಿ ದಂಪತಿಗಳು ವಿವಾಹವಾದರು.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹದ ಫೋಟೋ ಇದೀಗ ವೈರಲ್‌ ಆಗಿದ್ದು, ಇಬ್ಬರೂ ಸಹ ಸಾಂಪ್ರದಾಯಿಕ ಉಡಪಿನಲ್ಲಿ ಸಖತ್‌ ಮಿಂಚಿದ್ದಾರೆ. ಡಿಸೈನರ್ ಅನಾಮಿಕಾ ಖನ್ನಾ ಸ್ಟಾರ್‌ ಜೋಡಿಗೆ ಡ್ರೆಸ್‌ ಡಿಸೈನ್‌ ಮಾಡಿದ್ದಾರೆ.

ವಿಜಯ್‌ ದೇವರಕೊಂಡ ಹಂಚಿಕೊಂಡ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ಕಣ್ಣೀರಿಟ್ಟಿದ್ದನ್ನು ನೋಡಬಹುದು. ವಿಜಯ್‌ ತಾಳಿಕಟ್ಟುವ ವೇಳೆ ಭಾವುಕವಾಗಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿರುವ ರಶ್ಮಿಕಾ ಸಂತಸವನ್ನು ಕಣ್ಣಿನ ಮೂಲಕ ತಿಳಿಸಿದ್ದಾರೆ.