ಶಂಕರನಾರಾಯಣ: ಉಡುಪಿ ಜಿಲ್ಲೆಯ ಕುಂದಾಪುರದ ಶಂಕರನಾರಾಯಣ ಸಮೀಪ ವ್ಯಕ್ತಿಯೊಬ್ಬರು ಸಿಮೆಂಟ್ ತಗಡಿನ ಶೇಡ್ ನ ಮಾಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಗಣೇಶ್ ನಾಯಕ್ ಎಂದು ತಿಳಿಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಆದೇಶ ನಾಯಕ್ (34),ಸಿದ್ದಾಪುರ ಗ್ರಾಮ, ಕುಂದಾಪುರ ಇವರ ತಂದೆ ಗಣೇಶ ನಾಯಕ್ (62) ರವರು ಬ್ರಹ್ಮಾವರದ ಆಶ್ರಯ ಸಭಾಭವನದಲ್ಲಿ ಪಿರ್ಯಾದಿದಾರರೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿ ಮದ್ಯಾಹ್ನ 02:30 ಗಂಟೆಗೆ ಮನೆಗೆ ಬಂದವರು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಅಡಿಕೆ ಒಣಗಿಸಲು ಮನೆಯಿಂದ ಹೊರಗಡೆ ಹೋದವರು ಮರಳಿ ಬಾರದೇ ಇದ್ದದ್ದನ್ನು ಕಂಡು ಪಿರ್ಯಾದಿದಾರರ ತಾಯಿ ಸವಿತಾ ನಾಯಕ್ ರವರು ಕೂಗಿ ಕರೆದಾಗ ಗಣೇಶ ನಾಯಕ್ ರವರು ಮಾತನಾಡದೇ ಇರುವುದನ್ನು ನೋಡಿ ಸವಿತಾ ನಾಯಕ್ ರವರು ಅವರನ್ನು ಹುಡುಕಾಡಲಾಗಿ ಎಲ್ಲೂ ಕಾಣದೇ ಇದ್ದು ನಂತರ ಮನೆಯ ಹಿಂಬದಿ ಜೀಪ್ ನಿಲ್ಲಿಸಲು ಮಾಡಿದ ಸಿಮೆಂಟ್ ತಗಡಿನ ಶೇಡ್ ನ ಬಳಿ ಹೋದಾಗ ಅಲ್ಲಿ ಸಿಮೆಂಟ್ ತಗಡಿನ ಶೇಡ್ ನ ಮಾಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವವರನ್ನು ಕಂಡ ಸವಿತಾ ನಾಯಕ್ ರವರು ಬೊಬ್ಬೆ ಹಾಕಿಕೊಂಡಾಗ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದ್ದು, ಗಣೇಶ ನಾಯಕ್ ರವರು ಜೀಪ್ ನಿಲ್ಲಿಸಲು ಮಾಡಿದ ಸಿಮೆಂಟ್ ಶೇಡ್ ತಗಡಿನ ಮಾಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



