ಬೈಂದೂರು : ಮಾಂಸ ಮಾಡಿ ಮಾರಾಟ ಮಾಡಲು ಅಕ್ರಮವಾಗಿ ಎತ್ತುಗಳನ್ನು ತಂದು ಕಟ್ಟಿ ಹಾಕಿದ ವ್ಯಕ್ತಿಯನ್ನು ಬೈಂದೂರು ಪೊಲೀಸರು ಬಧಿಸಿದ್ದಾರೆ.
ಬಂಧಿತ ಆರೋಪಿ ಮಹಮ್ಮದ್ ಸಾಜೀದ್ ಎಂದು ಗುರುತಿಸಲಾಗಿದೆ.
ಪೊಲೀಸರು 4 ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ದಿನಾಂಕ: 02-06-2024 ರಂದು ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯ ಮೊಹಲ್ಲಾದಲ್ಲಿ ಮಹಮ್ಮದ್ ಸಾಜೀದ್ ಎಂಬವನು ಯಾವುದೇ ಪರವಾನಿಗೆ ಇಲ್ಲದೇ ಮಾಂಸ ಮಾಡಿ ಮಾರಾಟ ಮಾಡಲು 4 ಎತ್ತಿನ ಗುಡ್ಡಗಳನ್ನು ಅಕ್ರಮವಾಗಿ ತಂದು ಕಟ್ಟಿ ಹಾಕಿದ್ದು, ಅವುಗಳನ್ನು ಸ್ವಾಧೀನಪಡಿಸಿಕೊಂಡು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2025 ಕಲಂ. u/s 7, 12 THE KARNATAKA PREVENTION OF SLAUGHTER AND PRESERVATION OF CATTLE ACT-2020 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.


