Home Crime ಮಣಿಪಾಲ : ಮನೆಯೊಂದರಲ್ಲಿ ಬೆಲೆಬಾಳುವ ಸೊತ್ತುಗಳು ಕಳವು…!!

ಮಣಿಪಾಲ : ಮನೆಯೊಂದರಲ್ಲಿ ಬೆಲೆಬಾಳುವ ಸೊತ್ತುಗಳು ಕಳವು…!!

ಮಣಿಪಾಲ: ನಗರದ ಸಮೀಪ ವ್ಯಕ್ತಿಯೊಬ್ಬರ ಮನೆಯ ಬೀಗ ಮುರಿದು ಕಳ್ಳರು ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸಂಭವಿಸಿದೆ.

ಹೆರ್ಗ ನಿವಾಸಿ ಸುಬ್ಬಣ್ಣ  ಎಂಬವರ ಮನೆ ಕಳ್ಳತನ ನಡೆದಿದೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ವಿವರ: ಪಿರ್ಯಾದಿ ಎ ಸುಬ್ಬಣ್ಣ (82), ಹೆರ್ಗಾ ಗ್ರಾಮ, ಉಡುಪಿ ಇವರು ದಿನಾಂಕ:30.05.2025 ರಂದು ಮದ್ಯಾಹ್ನ 12:30 ಗಂಟೆಗೆ ಮಂಗಳೂರಿಗೆ ಮಗನ ಮನೆಗೆ ಹೋಗಿದ್ದು ಸಂಜೆ 06:00 ಗಂಟೆಗೆ ಮನೆಯ ಕೆಲಸದವರು ಬೀಗ ಹಾಕಿ ಅವರ ಮನೆಗೆ ಹೋಗಿ ವಾಪಾಸ್ಸು ಬೆಳಿಗ್ಗೆ 08:30 ಗಂಟೆಗೆ ಬಂದಾಗ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು 55,100/- ರೂ ಬೆಲೆಬಾಳುವ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 89/2025 ಕಲಂ: 331(3) 331(4) 305 BNS ನಂತೆ ಪ್ರಕರಣ ದಾಖಲಾಗಿರುತ್ತದೆ.