Home Latest ಕಾಪು: ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ಲಾಕ್..!

ಕಾಪು: ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ಲಾಕ್..!

ಕಾಪು : ಯೋಜನಾ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿ ಒಳಗ ಲಾಕ್ ಆಗಿರುವ ಘಟನೆ ಕಾಪು ಪುರಸಭೆ ಕಟ್ಟಡದಲ್ಲಿ ಸಂಜೆ ನಡೆದಿದೆ.

ಪುರಸಭೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕಾಪು ಯೋಜನಾ ಪ್ರಾಧಿಕಾರದ ಎರಡು ಕಚೇರಿಗಳಿಗೆ ತೆರಳಲು ಇರುವುದು ಒಂದೇ ದ್ವಾರ.

ಸಂಜೆ 5:30 ರಿಂದ 6 ಗಂಟೆಯ ನಡುವೆ ಬಾಗಿಲಿಗೆ ಬೀಗ ಹಾಕುವ ಪುರಸಭೆ ಸಿಬ್ಬಂದಿಗಳು ಪ್ರಾಧಿಕಾರದ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡುತ್ತಿದ್ದರು. ಅನಾರೋಗ್ಯದಿಂದ ಬೀಗ ಹಾಕುವ ಸಿಬ್ಬಂದಿ ರಜೆ ಮಾಡಿದ್ದರು.

ಈ ವೇಳೆ ಬೀಗ ಹಾಕಲು ಬಂದಿರುವ ಇನ್ನೋರ್ವ ಸಿಬ್ಬಂದಿ ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿಗಳ ಬಗ್ಗೆ ಗಮನಕೊಡದೆ ಬಾಗಿಲು ಬಂದ್ ಮಾಡಿದ್ದಾರೆ.

ಕೆಲಸ ಮುಗಿಸಿ ಮುಖ್ಯ ದ್ವಾರದ ಬಳಿಗೆ ಬಂದ ಪ್ರಾಧಿಕಾರದ ಸಿಬ್ಬಂದಿಗಳಿಗೆ ಬೀಗ ಹಾಕಿರುವುದು ಪತ್ತೆಯಾಗಿದೆ. ನಂತರ ಪೊಲೀಸರಿಗೆ ಕರೆ ಮಾಡಿದ ಪ್ರಾಧಿಕಾರದ ಸಿಬ್ಬಂದಿಗಳು ಪುರಸಭೆಯ ಮುಖ್ಯ ಅಧಿಕಾರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ. ತಕ್ಷಣವೇ ಬೀಗ ತೆಗೆದು ಸಿಬ್ಬಂದಿಗಳನ್ನು ಪುರಸಭೆ ನೌಕರ ಕಳುಹಿಸಿಕೊಟ್ಟಿದ್ದಾನೆ.