Home Crime ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ…!!

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ…!!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆಸಿ ಕೆಲವೊಂದು ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೈದಿಗಳ ನಿಷೇಧಿತ ವಸ್ತುಗಳ ಬಳಕೆ ಮಾಡುತ್ತಿರುವ ಮಾಹಿತಿ ಮೇರೆಗೆ ಫೆ.21ರಂದು ಮುಂಜಾನೆ 6 ಗಂಟೆ ಸುಮಾರಿಗೆ ಸಿಸಿಬಿಯ ಹಿರಿಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ವಿಚಾರಣಾಧೀನ ಕೈದಿಗಳು, ಸಜಾ ಕೈದಿಗಳು, ಗಣ್ಯ ವ್ಯಕ್ತಿಗಳ ಬ್ಯಾರಕ್‌, ಮಹಿಳಾ ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಕೈದಿಗಳ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ.

ಈ ವೇಳೆ ಚೂಪಾದ ಲೋಹದ ವಸ್ತುಗಳು, ತಂಬಾಕು ರೀತಿಯ ಪದಾರ್ಥಗಳು, ಬೆಳ್ಳಿಯ ಬಳೆ, ಚೈನ್‌ ಗಳು, ಮೊಬೈಲ್‌ ಚಾರ್ಜರ್‌ಗಳು , ಮೊಬೈಲ್‌ ಬ್ಯಾಟರಿ ಹಾಗೂ 9,340 ರೂ. ನಗದು ಪತ್ತೆಯಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.