Home Crime ರಾಜೀವ ಗೌಡನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಮೈಕಲ್ ಅರೆಸ್ಟ್ : ಫಾರ್ಮ್ ಹೌಸ್ ನಲ್ಲಿ ಅಡಗಿಕೊಂಡಿದ್ದ...

ರಾಜೀವ ಗೌಡನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಮೈಕಲ್ ಅರೆಸ್ಟ್ : ಫಾರ್ಮ್ ಹೌಸ್ ನಲ್ಲಿ ಅಡಗಿಕೊಂಡಿದ್ದ ಕಾಂಗ್ರೆಸ್ ಮುಖಂಡನಿಗೆ ಖಾಕಿ ಡ್ರಿಲ್…!!

ಮಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೌರಾಯುಕ್ತೆಗೆ ಅವಾಚ್ಯ ನಿಂದಿಸಿ ಅರೆಸ್ಟ್ ಆಗಿರುವ ಕಾಂಗ್ರೆಸ್ ಮುಖಂಡ ರಾಜೀವ ಗೌಡನಿಗೆ ಮಂಗಳೂರಿನ ಫಾರ್ಮ್ ಹೌಸ್ ನಲ್ಲಿ ಆಶ್ರಯ ನೀಡಲಾಗಿತ್ತು ಎನ್ನುವ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ‌

ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಫಾರ್ಮ್ ಹೌಸ್ ಮಾಲೀಕ ಮೈಕಲ್ ಜೋಸೆಫ್ ರೇಗೊ ಅವರನ್ನು ಬಂಧಿಸಿದ್ದಾರೆ.

ರಾಜೀವ ಗೌಡ ತನ್ನ ಸಂಬಂಧಿಕರ ಕಾರಿನಲ್ಲಿ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದು ಅಲ್ಲಿ ಕಾರು ಬಿಟ್ಟು ಹೋಗಿದ್ದ ಎನ್ನುವ ಮಾಹಿತಿ ಮೂರು ದಿನಗಳ ಹಿಂದೆಯೇ ಪೊಲೀಸರಿಗೆ ಲಭಿಸಿತ್ತು.

ರೈಲಿನಲ್ಲಿ ಕೇರಳಕ್ಕೆ ತೆರಳಿರುವ ಶಂಕೆಯಲ್ಲಿ ಕರ್ನಾಟಕ ಪೊಲೀಸರು ಕೇರಳಕ್ಕೆ ತೆರಳಿದ್ದರು‌. ಸೋಮವಾರ ಬೆಳಗ್ಗೆ ತಿರುವನಂತಪುರದಿಂದ ತಮಿಳುನಾಡು ಕಡೆಗೆ ಎಸ್ಕೇಪ್ ಆಗುವಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ‌

ವಿಚಾರಣೆ ಸಂದರ್ಭದಲ್ಲಿ ಮಂಗಳೂರಿನಲ್ಲಿ ಕೆಲವು ದಿನ ಉಳಿದುಕೊಂಡಿದ್ದು ಆಶ್ರಯ ನೀಡಿದ್ಯಾರು ಎಂಬಿತ್ಯಾದಿ ವಿಚಾರ ತಿಳಿಯುತ್ತಲೇ ಪೊಲೀಸರು ಆಶ್ರಯ ನೀಡಿದವರಿಗೂ ಬೇಡಿ ಹಾಕಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ರಾಜಕೀಯ ಸ‌ಂಪರ್ಕ ಹೊಂದಿರುವ ಮೈಕಲ್ ಜೋಸೆಫ್ ರೇಗೊ ಪಚ್ಚನಾಡಿಯಲ್ಲಿ ಫಾರ್ಮ್ ಹೌಸ್ ಮಾಡಿಕೊಂಡಿದ್ದಾರೆ. ಅಲ್ಲದೆ, ಮಂಗಳೂರಿನ ಫಳ್ನೀರ್ ನಲ್ಲಿ ಫರ್ನಿಚರ್ ಶೋರೂಮ್ ಹೊಂದಿದ್ದಾರೆ ಎನ್ನಲಾಗಿದೆ. ಸದ್ಯ ಚಿಕ್ಕಬಳ್ಳಾಪುರ ಪೊಲೀಸರು ಅವರನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ.

ಫ್ಲೆಕ್ಸ್ ಕಿತ್ತು ಹಾಕಿದ ವಿಚಾರದಲ್ಲಿ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡರಿಗೆ ಕರೆ ಮಾಡಿದ್ದ ರಾಜೀವ ಗೌಡ ಅವಾಚ್ಯವಾಗಿ ನಿಂದಿಸಿದ್ದ. ಈ ಬಗ್ಗೆ ಪೌರಾಯುಕ್ತೆ ನೀಡಿದ ದೂರಿನಂತೆ ಎಫ್ಐಆರ್ ದಾಖಲಾಗಿತ್ತು.