Home Crime ಮಣಿಪಾಲ : ಯುವಕ ನಾಪತ್ತೆ – ಪ್ರಕರಣ ದಾಖಲು..!!

ಮಣಿಪಾಲ : ಯುವಕ ನಾಪತ್ತೆ – ಪ್ರಕರಣ ದಾಖಲು..!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಶಿವಳ್ಳಿ ಗ್ರಾಮದ ರುದ್ರಪ್ರಿಯ ನಗರ 1ನೇ ತಿರುವಿನ ನಿವಾಸಿ ಅಶೋಕ್ ನಾಯ್ಕ (61) ಅವರು ತಮ್ಮ ಪುತ್ರ ಅಮರ್ ನಾಯ್ಕ್ (29) ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಅಮರ್ ನಾಯ್ಕ್ ಅವರು ಕಳೆದ 6 ತಿಂಗಳಿನಿಂದ ಗೋವಾದಲ್ಲಿ ಡೊಮಿನೋಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 17, 2026ರಂದು ಗೋವಾದಿಂದ ಮನೆಗೆ ಬಂದಿದ್ದ ಅವರು, ಫೆಬ್ರವರಿ 18ರಂದು ಮಧ್ಯಾಹ್ನ 3:30ಕ್ಕೆ “ಉಡುಪಿಗೆ ಹೋಗುತ್ತೇನೆ” ಎಂದು ಹೇಳಿ, ಇಂದ್ರಾಳಿ ದೇವಸ್ಥಾನ ರಸ್ತೆಯಲ್ಲಿರುವ ಮನೆಯಿಂದ ಹೊರಟಿದ್ದಾರೆ. ಬಳಿಕ ಮನೆಗೂ ಅಥವಾ ಸಂಬಂಧಿಕರ ಮನೆಗೂ ವಾಪಸ್ಸಾಗದೇ ಕಾಣೆಯಾಗಿದ್ದಾರೆ.

ಕಾಣೆಯಾದವರ ವಿವರ ಹೀಗಿದೆ

ಹೆಸರು: ಅಮರ್ ನಾಯ್ಕ್ (29)

ಎತ್ತರ: 5.3 ಅಡಿ

ಮೈಬಣ್ಣ: ಎಣ್ಣೆ ಕಪ್ಪು

ಧರಿಸಿದ ಉಡುಪು: ಬೂದು ಬಣ್ಣದ ಪ್ಯಾಂಟ್, ಕ್ರೀಮ್ ಬಣ್ಣದ ಶರ್ಟ್

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ