Home Crime ಮಗನನ್ನು ಕೊಂದವರು ಸಾಯಲೇಬೇಕು : ಅಬ್ದುಲ್ ರಹೀಂನ ಅಪ್ಪ ಅಬ್ದುಲ್ ಖಾದರ್…!!

ಮಗನನ್ನು ಕೊಂದವರು ಸಾಯಲೇಬೇಕು : ಅಬ್ದುಲ್ ರಹೀಂನ ಅಪ್ಪ ಅಬ್ದುಲ್ ಖಾದರ್…!!

ಮಂಗಳೂರು: “ನನ್ನ ಮಗನನ್ನು ಅನ್ಯಾಯವಾಗಿ ಬರ್ಬರವಾಗಿ ಕೊಂದಿದ್ದಾರೆ. ಯಾರು ಕೊಂದಿದ್ದಾರೋ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ನನ್ನ ಮಗನ ಸಾವಿಗೆ ಸರಕಾರ ಪರಿಹಾರ ಕೊಡಬೇಕು ಎಂದು ಅಬ್ದುಲ್ ರಹೀಂನ ತಂದೆ ಅಬ್ದುಲ್ ಖಾದರ್ ಹೇಳಿದರು.

ತಮ್ಮ ಮಗನ ಹತ್ಯೆಯ ಬಗ್ಗೆ ಕೊಳತ್ತಮಜಲು ಮನೆಯಲ್ಲಿ ಮಾತನಾಡಿದ ಅವರು, ರಹೀಂ ನಮ್ಮ ಕುಟುಂಬದ ಆಧಾರ ಸ್ತಂಭವಾಗಿದ್ದ. ಈಗ ನಮಗೆ ಬೇರೆ ಯಾವ ಆಸರೆಯೂ ಇಲ್ಲ,‌”ನನ್ನ ಮಗನನ್ನು ಕೊಂದವನನ್ನು ಕಾನೂನಿನ ಶಿಕ್ಷೆಯ ಪ್ರಕಾರ ಕೊಲ್ಲಲೇಬೇಕು, ಮಧ್ಯಾಹ್ನ ಮೂರು ಗಂಟೆಗೆ ಮನೆಯಿಂದ ಹೊರಟ ರಹೀಂ ಮತ್ತೆ ವಾಪಸ್ ಬರಲೇ ಇಲ್ಲ. ಮಗ ತನ್ನ ಕನಸಿನ ಮನೆ ಕಟ್ಟಲು ಶುರು ಮಾಡಿದ್ದ, ಆದರೆ ಈಗ ಅದು ಅರ್ಧದಲ್ಲೇ ನಿಂತಿದೆ,” ಎಂದು ಹೇಳಿದರು.