Home Latest ಉಡುಪಿ: ಶೋಭಾ ಕಲ್ಮಾಡಿ ಅವರಿಗೆ “ರಾಜ್ಯದ್ಯ ಹಾಸ್ಯ ಕಲಾವಿದೆ ರತ್ನ” ರಾಷ್ಟ್ರೀಯ ಮಟ್ಟದ ಪ್ರಶಸ್ತಿ…!!

ಉಡುಪಿ: ಶೋಭಾ ಕಲ್ಮಾಡಿ ಅವರಿಗೆ “ರಾಜ್ಯದ್ಯ ಹಾಸ್ಯ ಕಲಾವಿದೆ ರತ್ನ” ರಾಷ್ಟ್ರೀಯ ಮಟ್ಟದ ಪ್ರಶಸ್ತಿ…!!

ಉಡುಪಿ: ರಂಗಭೂಮಿ ಕಲಾಕ್ಷೇತ್ರದಲ್ಲಿ ಹಾಸ್ಯ ಕಲಾ ಬೊಳ್ಳಿ ವಿಜೇತರಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯ ಶ್ರೀಮತಿ ಶೋಭಾ ಕಲ್ಮಾಡಿ ಅವರಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಚಿರಾಯು ಕನ್ನಡ ವಾಹಿನಿ ಪ್ರತಿಫಲ ಫೌಂಡೇಶನ್ (ರಿ.), ಧಾರವಾಡ ಹಾಗೂ ಅಲಿಯನ್ಸ್ ಇಂಟರ್ನ್ಯಾಷನಲ್ ಕ್ಲಬ್ ಆಫ್ ಕರುನಾಡ ಮೈಸೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ರೈತ ಸಂಭ್ರಮೋತ್ಸವ ಮೈಸೂರು – 2026 ರ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಗೌರವ ಸಲ್ಲಲಿದೆ.

ದಿನಾಂಕ 29-11-2026 ರವಿವಾರದಂದು ಮುಂಜಾನೆ 9:30 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭವನ, ಮೈಸೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಶೋಭಾ ಕಲ್ಮಾಡಿ ಅವರಿಗೆ “ರಾಜ್ಯದ್ಯ ಹಾಸ್ಯ ಕಲಾವಿದೆ ರತ್ನ” ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.

ರಂಗಭೂಮಿಯಲ್ಲಿ ಹಾಸ್ಯ ಕಲಾವಿದೆಯಾಗಿ ನೀಡಿದ ವಿಶೇಷ ಕೊಡುಗೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶೋಭಾ ಕಲ್ಮಾಡಿ ಇವರು ಕಲ್ಮಾಡಿ ಮಹಿಳಾ ಮಂಡಲದ ಅಧ್ಯಕ್ಷರಾಗಿ ಜನ ಸೇವೆ ಮಾಡುತ್ತಿದ್ದಾರೆ.