Home Latest ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ…!!

ಮಲ್ಪೆ: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ…!!

ಮಲ್ಪೆ: ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.

ದೂರುದಾರರನ್ನು ತಮಿಳುನಾಡು ರಾಜ್ಯದ ರಾಮನಾಥಪುರಂ ಜಿಲ್ಲೆಯ ರಾಜ (42) ಎಂದು ತಿಳಿಯಲಾಗಿದೆ.

ಇವರು ಮಲ್ಪೆ ಬಂದರಿನ ಬೋಟ್ ನಂ IND-KA-02-MM-5812 ನೇದರಲ್ಲಿ ತಾಂಡೇಲನಾಗಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ದಿನಾಂಕ 14-11-2026 ರಂದು ಬೋಟಿನಲ್ಲಿ ಒಟ್ಟು 08 ಜನ ಮೀನುಗಾರರೊಂದಿಗೆ ಬೆಳಿಗ್ಗೆ 04-00 ಗಂಟೆಗೆ ಮೀನುಗಾರಿಕೆಗೆ ಮಲ್ಪೆ ಬಂದರಿನಿಂದ ಹೊರಟು, ದಿನಾಂಕ 15-11-2026 ರಂದು ಆಳ ಸಮುದ್ರಕ್ಕೆ ತಲುಪಿ, ದಿನಾಂಕ 16-11-2026 ಮತ್ತು 17-11-2026 ರಂದು ಮೀನುಗಾರಿಕೆ ಮಾಡಿದ್ದರು.

ನಂತರ ದಿನಾಂಕ 17-11-2026 ರಂದು ರಾತ್ರಿ 11-00 ಗಂಟೆಗೆ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ ದಿನಾಂಕ 18-11-2026 ರಂದು ಸಮಯ ಸುಮಾರು ಬೆಳಿಗ್ಗೆ 04-00 ಗಂಟೆಗೆ ಎದ್ದು ಮೀನುಗಾರಿಕೆ ಮಾಡುವ ವೇಳೆ ನೋಡಿದಾಗ ಮೀನುಗಾರರ ಪೈಕಿ ನಿತಿಯಾನಂತಮ್ (31) ರವರು ಬೋಟಿನಿಂದ ಸಮುದ್ರದ ನೀರಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕಾಣೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.