Home Crime ಕೋಟ: ಹಳೆಯ ಮನೆಯಲ್ಲಿ ವ್ಯಕ್ತಿ ನೇಣಿಗೆ ಶರಣು…!!

ಕೋಟ: ಹಳೆಯ ಮನೆಯಲ್ಲಿ ವ್ಯಕ್ತಿ ನೇಣಿಗೆ ಶರಣು…!!

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಬಾಳ್ಕುದ್ರು ಗ್ರಾಮದ ಹಳೆಯ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಮೃತರನ್ನು ದೇವೇಂದ್ರ (65) ಎಂದು ತಿಳಿದು ಬಂದಿದೆ. ಇವರು ಹಂಗಾರಕಟ್ಟೆಯ ಚಕ್ರವರ್ತಿ ಬಾರ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದರು.

ಸುಮಾರು 10 ವರ್ಷಗಳ ಹಿಂದೆ ಅಪಘಾತವಾಗಿ ಕಾಲು ನೋವಾಗಿದ್ದು, ಇದರಿಂದ ಅವರಿಗೆ ಕೆಲಸ ಮಾಡಲು ತೊಂದರೆಯಾಗುತ್ತಿತ್ತು ಎಂದು ತಿಳಿಯಲಾಗಿದೆ.

ಬೆಳಿಗ್ಗೆ 7.30 ಗಂಟೆಗೆ ದೂರುದಾರರ ಮಾವ ಹಳೆಯ ಮನೆಯ ಬಳಿ ಬಂದಾಗ, ದೇವೇಂದ್ರ ಅವರು ನೇಣು ಹಾಕಿಕೊಂಡಿರುವುದು ಎನ್ನಲಾಗಿದೆ.

ಈ ಬಗ್ಗೆ ದೇವೇಂದ್ರ ಅವರ ಪುತ್ರ ರಂಜನ್ (28), ಬಾಳ್ಕುದ್ರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್.  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.