ಬೈಂದೂರು: ಪಟಾಕಿ ಅಂಗಡಿ ನಡೆಸಲು ಬಿಡುವುದಿಲ್ಲ ಎಂದು ಗುಂಪೊಂದು ಅಂಗಡಿಗೆ ದಾಳಿ ಮಾಡಿ ಪಟಾಕಿ ಎಸೆದು, ಟೇಬಲ್ ಹಾಗೂ ಕಲ್ಲಿನಿಂದ ಹಲ್ಲೆ ಮಾಡಿದ ಘಟನೆ ಶಿರೂರು ಗಾಂಧಿ ಮೈದಾನದಲ್ಲಿ ನಡೆದಿದೆ.
ಪಿರ್ಯಾದಿದಾರರು ಸಾಯಿರಾಮ್ (22), ತಂದೆ ಮಹಾಬಲೇಶ್ವರ ಮೇಸ್ತ, ವಾಸ: 9-85, ಹಡವಿನ ಕೋಣೆ, ಶಿರೂರು ಇವರು
ನ.10 ರಂದು ಸಂಜೆ ಸುಮಾರು 4:30ಕ್ಕೆ ಸಾಯಿರಾಮ್ ಅವರು ಶಿರೂರು ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆದು ವ್ಯಾಪಾರ ಮಾಡಿಕೊಂಡಿದ್ದರು.
ಈ ವೇಳೆ ಆರೋಪಿಗಳಾದ 1) ಶಶಿಕುಮಾರ್ ಮೇಸ್ತ, 2) ತಿಮ್ಮಪ್ಪ ಮೇಸ್ತ, 3) ಸೌಮ್ಯ ತಿಮ್ಮಪ್ಪ ಮೇಸ್ತ, 4) ದೀಕ್ಷಿತ್ ಮೇಸ್ತ, 5) ನಿತೇಶ್ ತಿಮ್ಮಪ್ಪ ಮೇಸ್ತ, 6) ದರ್ಶನ್ ನಾಗರಾಜ ಮೇಸ್ತ, 7) ದೀಪಕ್ ಬಾಲಕೃಷ್ಣ ಮೇಸ್ತ, 8) ಧನುಷ್ ಬಾಲಕೃಷ್ಣ ಮೇಸ್ತ, 9) ಆಶಿಶ್ ಮೇಸ್ತ, 10) ಮಂಜುನಾಥ ನಾಗೇಶ್ ಮೇಸ್ತ, 11) ಶ್ರೀಧರ್ ಜಿ. ಅವರು KA 20 HK 4571 ನೇ ಸ್ಕೂಟಿಯಲ್ಲಿ ಬಂದು ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತರಿಗೆ ಅವಾಚ್ಯವಾಗಿ ಬೈದು, “ನಿಮಗೆ ಇಲ್ಲಿ ಅಂಗಡಿ ನಡೆಸಲು ಬಿಡುವುದಿಲ್ಲ” ಎಂದು ಹೇಳಿ ಅಂಗಡಿಯಲ್ಲಿ ಇಟ್ಟಿದ್ದ ಪಟಾಕಿಗಳನ್ನು ಎಸೆದಿದ್ದಾರೆ.
ಅಂಗಡಿಯಲ್ಲಿದ್ದ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತರಾದ ದರ್ಶನ್, ಪಿಯೂಷ್ ಅವರನ್ನು ದೂಡಿ, ಕೌಂಟರ್‌ನಲ್ಲಿದ್ದ ಟೇಬಲ್‌ನಿಂದ ಮತ್ತು ದೊಡ್ಡ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಸಾಯಿರಾಮ್ ಅವರ ಕಾಲಿಗೆ ಹಾಗೂ ದರ್ಶನ್ ಅವರ ಎದೆಗೆ ಪೆಟ್ಟಾಗಿದ್ದು, ಅವರ ಸ್ನೇಹಿತರಿಗೂ ಗಾಯಗಳಾಗಿವೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



