Home Latest ಮುಲ್ಕಿಯ ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ..!!

ಮುಲ್ಕಿಯ ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ..!!

ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಪತ್ನಿ ಹಾಗೂ ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ.

ಮುಲ್ಕಿ ಪರಿಸರದಲ್ಲಿ ಖ್ಯಾತ ವಕೀಲರಾಗಿ ಸಾಮಾಜಿಕ ಚಟುವಟಿಕೆಗಳ ಮೂಲಕ ಪ್ರಸಿದ್ಧರಾಗಿದ್ದ ಅವರು,
ಮುಲ್ಕಿ ಆಟೋ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ, ದಕ್ಷಿಣ ಕನ್ನಡ ಕಾಸರಗೋಡು ಯುವಜನ ಒಕ್ಕೂಟದ ಪದಾಧಿಕಾರಿ, ಕೃತಿಕಾರರು, ಮುಲ್ಕಿ ಅಯ್ಯಪ್ಪ ಸಮಿತಿಯ ಗೌರವ ಸಲಹೆಗಾರರು, ಹೆಜಮಾಡಿ ಜೈ ಕರ್ನಾಟಕ ಸಂಸ್ಥೆ, ಕಾರ್ನಾಡ್ ಯುವಕ ಮಂಡಲ ಸಹಿತ ಅನೇಕ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು

ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು,
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್,  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಉದ್ಯಮಿ ಅತುಲ್ ಕುಡ್ವ, ನಿವೃತ್ತ ಬ್ಯಾಂಕ್ ಪ್ರಬಂಧಕ ಸತೀಶ್ ಭಂಡಾರಿ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು ಡಾ. ಹರಿಶ್ಚಂದ್ರ ಪಿ ಸಾಲ್ಯಾನ್,  ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಮಟ್ಟು, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಮಾಜಿ ಅಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿ ಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಮನೋಹರ ಕೋಟ್ಯಾನ್, ಮುಲ್ಕಿ ನ.ಪಂ ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಮಾಜೀ ಸದಸ್ಯರಾದ ಪುತ್ತು ಬಾವ,ಉಮೇಶ್ ಮಾನಂಪಾಡಿ, ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ,, ವಿನೋದ್ ಸಾಲ್ಯಾನ್ ಬೆಳ್ಳಾಯರು
ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು,ಉದಯಕುಮಾರ್ ಶೆಟ್ಟಿ ಅಧಿಧನ್, ಕಿಶೋರ್ ಶೆಟ್ಟಿ ಬಪ್ಪನಾಡು, ಸುರೇಶ್ ಶೆಟ್ಟಿ ಶಿಮಂತೂರು, ಶರತ್ ಕಾರ್ನಾಡ್, ಪ್ರಾಣೇಶ್ ಹೆಜ್ಮಾಡಿ ಮುಲ್ಕಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೇವರಾಜ್ ಕೊಲಕಾಡಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.