Home Latest ಕೊಡವೂರ್ದ ಬ್ರಹ್ಮಕಲಶೋತ್ಸವ : ಪೂರ್ವಭಾವಿಸಭೆ…!!

ಕೊಡವೂರ್ದ ಬ್ರಹ್ಮಕಲಶೋತ್ಸವ : ಪೂರ್ವಭಾವಿಸಭೆ…!!

ಮಲ್ಪೆ ಜನವರಿ 20, 2027 ಮಹಾತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಡವೂರಿನ ಅಷ್ಟಬಂದ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಪೂರ್ವಭಾವಿ ಸಮಾಲೋಚನಾ ಸಭೆಯು ಶನಿವಾರ ಶ್ರೀ ದೇವಳದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್ ನೇತೃತ್ವದಲ್ಲಿ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗು ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಕೊಡವೂರು ಮಾತನಾಡುತ್ತಾ ಬ್ರಹ್ಮಕಲಶೋತ್ಸವ ಸಮಾರಂಭ ಅತ್ಯಂತ ವಿಜ್ರ೦ಭಣೆಯಿಂದ ಮಾಡಲು ನಿರ್ಧರಿಸಿದ್ದೇವೆ. ಅದಕ್ಕೆ ಎಲ್ಲ ಭಗವದ್ ಭಕ್ತರ ಸರ್ವರೀತಿಯ ಸಹಕಾರವನ್ನು ಯಾಚಿಸಿದರು.

ಸಭೆಯಲ್ಲಿ ಧಾರ್ಮಿಕ ಸಮಿತಿ, ಹೊರೆಕಾಣಿಕೆ ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ಅರೋಗ್ಯ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಉಗ್ರಾಣ ಸಮಿತಿ, ಊಟೋಪಚಾರ ಸಮಿತಿ, ಕಚೇರಿ ನಿರ್ವಹಣಾ ಸಮಿತಿ, ಸ್ವಯಂ ಸೇವಕರ ಸಮಿತಿ, ಸ್ವಚ್ಛತಾ ಸಮಿತಿ, ವಿದ್ಯುತ್ ಅಲಂಕಾರ ಸಮಿತಿ, ಚಪ್ಪರ ಸಮಿತಿ, ಮಹಿಳಾ ಘಟಕ ಸಮಿತಿ, ಭದ್ರತಾ ವ್ಯವಸ್ಥೆಯ ಸಮಿತಿ, ಪಾರ್ಕಿಂಗ್ ಸಮಿತಿ, ವೇದಿಕೆ ಸಮಿತಿ, ಭಜನಾ ಸಮಿತಿ, ಬಾಣಸಿಗರ ಸಮಿತಿ ಹೀಗೆ ಹತ್ತು ಹಲವು ಸಮಿತಿಗಳನ್ನು ರಚಿಸಲಾಯಿತು.

ಈ ಸಂಧರ್ಭದಲ್ಲಿ ಆನಂದ ಪಿ. ಸುವರ್ಣ, ನಾಗರಾಜ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಕೃಷ್ಣಮೂರ್ತಿ ಆಚಾರ್ಯ, ತೋಟದಮನೆ ದಿವಾಕರ ಶೆಟ್ಟಿ, ಪಿ ಗುರುರಾಜ್ ರಾವ್, ಪಾಂಡುರಂಗ ಮಲ್ಪೆ, ಆಶಾಚಂದ್ರ ಶೇಖರ್, ವಿಜಯ ಕೊಡವೂರು, ಮೀನಾಕ್ಷಿ ಮಾಧವ ಬನ್ನಂಜೆ,ನಾರಾಯಣ ಬಲ್ಲಾಳ್, ಉಮೇಶ್ವ ರಾವ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ್ ಪಾಲನ್, ಎ. ರಾಜ ಸೇರಿಗಾರ್, ಕೆ. ಬಾಬ, ಉಷಾ ಎ ಸುವರ್ಣ, ಶೀಲಾ ಸೇರಿಗಾರ್ ಉಪಸ್ಥಿತರಿದ್ದರು.

ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು ವಂದಿಸಿದರು.