Home Crime ಕಡಬ: ಹಳೆ ವೈಷಮ್ಯ – ಚಾಕುವಿನಿಂದ ಇರಿದು ಕೊಲ್ಲಲು ಯತ್ನ : ಇಬ್ಬರ ವಿರುದ್ಧ ಪ್ರಕರಣ…!!

ಕಡಬ: ಹಳೆ ವೈಷಮ್ಯ – ಚಾಕುವಿನಿಂದ ಇರಿದು ಕೊಲ್ಲಲು ಯತ್ನ : ಇಬ್ಬರ ವಿರುದ್ಧ ಪ್ರಕರಣ…!!

ಕಡಬ: ಹಳೆ ವ್ಯವಹಾರದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಕುತ್ತಿಗೆ ಒತ್ತಿ, ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ.

ದೂರುದಾರ ಶಾಫಿ (56), ಕುಂಡೋಳಿ ಮನೆ, ಮಾಲೇಶ್ವರ ದೇವಸ್ಥಾನದ ಹತ್ತಿರ, ಕೋಡಿಂಬಾಳ ಗ್ರಾಮ, ಕಡಬ ತಾಲೂಕು.

ಘಟನೆ ವಿವರ:
ನ.06 ರಂದು ಮಧ್ಯಾಹ್ನ ಸುಮಾರು 2:10ಕ್ಕೆ ಶಾಫಿ ಅವರು ಕಡಬ ಪೇಟೆಯಲ್ಲಿದ್ದಾಗ ಪರಿಚಯವಿರುವ ಆತೂರಿನ ರಾಜಿಕ್ ಮತ್ತು ಆತನ ಸ್ನೇಹಿತ ನವಾಜ್ ಆಕ್ಟಿವಾ ಬೈಕ್‌ನಲ್ಲಿ ಬಂದು ತಡೆದು ನಿಲ್ಲಿಸಿದ್ದಾರೆ.

ಈ ಹಿಂದೆ ಶಾಫಿ ಅವರು ರಾಜಿಕ್‌ನ ಸ್ನೇಹಿತ ಕೊಯಿಲ ಜಕಾರಿಯವರಿಗೆ ಉಪ್ಪಿನಂಗಡಿ ರವಿ ಭಟ್ ಅವರ ದೂರವಾಣಿ ನಂಬರ್ ನೀಡಿದ್ದು, ಅದರಂತೆ ಅವರೊಳಗೆ ವ್ಯವಹಾರಗಳು ನಡೆದು ಜಕಾರಿಯವರಿಗೆ ನಷ್ಟವುಂಟಾಗಿದೆ ಎಂದು ರಾಜಿಕ್ ಹೇಳಿದ್ದಾನೆ.

ಈ ವೇಳೆ ಬೈಕ್‌ನಿಂದ ಇಳಿದ ಹಿಂಬದಿ ಸವಾರ ನವಾಜ್, ಶಾಫಿ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಅದೇ ಸಮಯ ರಾಜಿಕ್ ಬೈಕ್‌ನಿಂದ ಇಳಿದು, ಬೈಕ್ ಸೀಟ್ ಕೆಳಗಿನಿಂದ ಚಾಕು ತೆಗೆದುಕೊಂಡು “ನಿನ್ನನ್ನು ಇವತ್ತು ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ ಚಾಕುವಿನಿಂದ ತಿವಿಯಲು ಬಂದಾಗ ಶಾಫಿ ಅವರು ತಪ್ಪಿಸಿಕೊಂಡಿದ್ದಾರೆ.

ಅಲ್ಲಿಯೇ ಇದ್ದ ಶಾಫಿ ಅವರ ಪರಿಚಯದ ಕಡಬದ ಶರೀಫ್ ಮತ್ತು ಹರೀಶ್ ಅವರು ಓಡಿ ಬಂದಾಗ ಆರೋಪಿಗಳು ಶಾಫಿ ಅವರನ್ನು ಬಿಟ್ಟು, ಮಲಯಾಳಂ ಭಾಷೆಯಲ್ಲಿ ಅವಾಚ್ಯವಾಗಿ ಬೈದು ಬೆದರಿಕೆ ಒಡ್ಡಿ, ರಾಜಿಕ್ ಸವಾರಿ ಮಾಡಿಕೊಂಡು ಬಂದ ಆಕ್ಟಿವಾ ಬೈಕ್‌ನಲ್ಲಿ ಇಬ್ಬರೂ ಪರಾರಿಯಾಗಿದ್ದಾರೆ.

ಬೈಕ್ ನಂಬರ್ KA-05-KJ-1397 ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾದ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.