Home Crime ಮಂಗಳೂರು: ಪಡೀಲ್‌ನಲ್ಲಿ ಸಿಸಿಬಿ ದಾಳಿ – 3 ಲಕ್ಷ ಮೌಲ್ಯದ LSD ಸಹಿತ ಇಬ್ಬರು ಆರೋಪಿಗಳ...

ಮಂಗಳೂರು: ಪಡೀಲ್‌ನಲ್ಲಿ ಸಿಸಿಬಿ ದಾಳಿ – 3 ಲಕ್ಷ ಮೌಲ್ಯದ LSD ಸಹಿತ ಇಬ್ಬರು ಆರೋಪಿಗಳ ಬಂಧನ…!!

ಮಂಗಳೂರು: ಅಕ್ರಮವಾಗಿ LSD ಮಾದಕ ವಸ್ತು ಮಾರಾಟ ಮಾಡಲು ಬಂದಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ಬಂಧಿಸಿದ್ದಾರೆ.

ಬಂಧಿತರನ್ನು ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30), ತುಂಬೆ ಪ್ಲಾಜಾ, ಅಳಪೆ, ಪಡೀಲ್ ಹಾಗೂ ಸಿದ್ದಾರ್ಥ ಶೆಟ್ಟಿ (35), ಎಮಿಲೇ ಮ್ಯಾನ್ಷನ್ ಅಪಾರ್ಟ್‌ಮೆಂಟ್, ದಡ್ಡಲ್‌ಕಾಡ್, ಉರ್ವಸ್ಟೋರ್ ಎಂದು ಗುರುತಿಸಲಾಗಿದೆ.

ದಾಳಿ ಹೇಗೆ ನಡೆಯಿತು?:
ನ.03 ರಂದು ಮಧ್ಯಾಹ್ನ 1:30ಕ್ಕೆ ಸಿಸಿಬಿ ಪಿಎಸ್‌ಐ ಹರೀಶ್ ಎಂ.ಆರ್ ಅವರಿಗೆ ಪಡೀಲ್ ರೈಲ್ವೆ ಬ್ರಿಡ್ಜ್ ಹತ್ತಿರ ಇಬ್ಬರು ವ್ಯಕ್ತಿಗಳು LSD ಇಟ್ಟುಕೊಂಡು ಮಾರಾಟಕ್ಕೆ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿತ್ತು.

ಅದರಂತೆ ಮಧ್ಯಾಹ್ನ 3 ಗಂಟೆಗೆ ಪಡೀಲ್ ಬ್ರಿಡ್ಜ್ ಬಳಿ ವೀರನಗರಕ್ಕೆ ಹೋಗುವ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಮಧ್ಯಾಹ್ನ 3:05ಕ್ಕೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಲಾಯಿತು. ಪಂಚರ ಸಮಕ್ಷಮ ಅಂಗಶೋಧನೆ ನಡೆಸಿದಾಗ LSD ಪತ್ತೆಯಾಗಿದೆ.

ವಶಪಡಿಸಿಕೊಂಡ ಸೊತ್ತು:

  • ನಿಹಾಲ್ ಬಳಿ: 1.02 ಗ್ರಾಂ ತೂಕದ, 50 LSD Blot ಗಳು ಇರುವ 3 LSD ಶೀಟ್‌ಗಳು – ಅಂದಾಜು ಮೌಲ್ಯ ರೂ. 1,50,000, ನೀಲಿ ಬಣ್ಣದ Samsung Galaxy A17 5G ಮೊಬೈಲ್ – ರೂ. 15,000
  • ಸಿದ್ದಾರ್ಥ ಶೆಟ್ಟಿ ಬಳಿ: 1.05 ಗ್ರಾಂ ತೂಕದ, ತಲಾ 25 Blot ಗಳು ಇರುವ 2 LSD ಶೀಟ್‌ಗಳು – ಅಂದಾಜು ಮೌಲ್ಯ ರೂ. 1,50,000, ಬಿಳಿ OPPO F33 Pro 5G ಮೊಬೈಲ್ – ರೂ. 10,000, ಹಸಿರು Vivo Y300 5G ಮೊಬೈಲ್ – ರೂ. 10,000, LSD ಇಟ್ಟಿದ್ದ ಕಾರ್ಡ್‌ಬೋರ್ಡ್ ಬಾಕ್ಸ್

ಒಟ್ಟು 2.07 ಗ್ರಾಂ ತೂಕದ 100 LSD Blot‌ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ ಮಾಡಲು ಇಟ್ಟುಕೊಂಡಿದ್ದು ಪತ್ತೆಯಾಗಿದೆ.

ಪೊಲೀಸರು ಮಹಜರು ಮೂಲಕ ಸೊತ್ತುಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.