ಕಾಪು :ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ ವತಿಯಿಂದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಉದ್ಯಮಶೀಲತಾ & ಸ್ವಾವಲಂಬಿ ಸಾರಥಿ ಯೋಜನೆಯಡಿ ಗೂಡ್ಸ್ ವಾಹನ ಹಾಗೂ ಸಹಾಧನ ಮಂಜೂರಾಗಿದ್ದು ಇಂದು ದಿನಾಂಕ 17-02-2026 ರಂದು ಶಾಸಕರ ಕಚೇರಿ ಕಾಪು ಇಲ್ಲಿ ಫಲಾನುಭವಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು.
ಸ್ವಾವಲಂಬಿ ಸಾರಥಿ ಯೋಜನೆಯಡಿ ಪಲಿಮಾರು ಗ್ರಾಮ ನಿವಾಸಿ ದಿನೇಶ್, ಕೊರಂಗ್ರಪಾಡಿ ಗ್ರಾಮದ ಅಭಿಲಾಶ್, ಅಲೆವೂರು ಗ್ರಾಮದ ದುರಗಪ್ಪ ಅವರಿಗೆ ಸೇರಿದಂತೆ ಒಟ್ಟು 3 ಫಲಾನುಭವಿಗಳಿಗೆ ಗೂಡ್ಸ್ ವಾಹನ ವಿತರಿಸಿ ಉದ್ಯಮಶೀಲತಾ ಯೋಜನೆಯಡಿ ಪಡುಬಿದ್ರಿ ಗ್ರಾಮ ನಿವಾಸಿ ಹರೀಶ್, ಬೊಮ್ಮರಬೆಟ್ಟು ಗ್ರಾಮದ ಮಂಜುನಾಥ್ ಟಿ.ಎಲ್, ಪಲಿಮಾರು ಗ್ರಾಮದ ಸೌಮ್ಯ ಸೇರಿದಂತೆ 3 ಫಲಾನುಭವಿಗಳಿಗೆ ಆರ್ಥಿಕ ಸಹಾಧನ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೌಮಲತಾ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ರಾಯೇಶ್ ಪೈ, ಬೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜೀಯಾನಂದ ಹೆಗಡೆ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ, ಬೆಳ್ಳಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಹರ್ಷಿತ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಶಂಕರ್ ಉಪಸ್ಥಿತರಿದ್ದರು.



