ಮಲ್ಪೆ : ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ದಲ್ಲಿ ಶ್ರೀ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ನಡೆಯಲಿರುವ ಮಹಾ ರುದ್ರ ಯಾಗ ಕಾರ್ಯಕ್ರಮ ಪೂರ್ವಭಾವಿಯಾಗಿ ಮಲ್ಪೆ ಮೀನುಗಾರರ ಸಂಘದ ಜೊತೆಗೆ ಸಭೆಯಲ್ಲಿ ನಡೆಸಲಾಯಿತು.

ಸಭೆ ಯಲ್ಲಿ ಮಹಾ ರುದ್ರ ಯಾಗ ಸೇವಕರ್ತರಾದ ಶ್ರೀ ಪ್ರಸಾದ್ ರಾಜ್ ಕಾಂಚನ್ ನಾಡಿನ ಸಮಸ್ತ ಮೀನುಗಾರರು ಲೋಕಾಕಲ್ಯಾಣಾರ್ಥವಾಗಿ ನಡೆಯುವ ಈ ಪುಣ್ಯ ಕಾರ್ಯ ದಲ್ಲಿ ಭಾಗವಹಿಸುವಂತೆ ಮನವಿ ಮಾಡಿ,ಅಮಂತ್ರಣ ಪತ್ರಿಕೆಯನ್ನು ಮೀನುಗಾರ ಮುಖಂಡರಿಗೆ ನೀಡಿ ಅಹ್ವಾನಿಸಿದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ ಸುವರ್ಣ, ಕಾರ್ಯದರ್ಶಿ ಜಗನ್ನಾಥ್ ಕುಂದರ್, ಉಪಾಧ್ಯಕ್ಷರುಗಳಾದ ಮಧುಕರ್ ಸುವರ್ಣ, ನಾಗರಾಜ್ ಬಿ ಕುಂದರ್, ಮಾಜಿ ಅಧ್ಯಕ್ಷರಾದ ಶಿವಪ್ಪ ಟಿ ಕಾಂಚನ್ ಹಾಗೂ ವಿವಿಧ ಮೀನುಗಾರರ ಸಂಘಟನೆಯ ಅಧ್ಯಕ್ಷರುಗಳು ಪದಾಧಿಕಾರಿಗಳು , ಅಧ್ಯಕ್ಷರಾದ ಪ್ರಕಾಶ್ ಕೊಡವೂರು, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕಾಂಚನ್, ಪ್ರದಾನ ಸಂಚಾಲಕರಾದ ತಾರಾನಾಥ್, ಸಂಚಾಲಕರಾದ ರಮೇಶ್ ಎಸ್ ತಿಂಗಳಾಯ, ಉಪಾಧ್ಯಕ್ಷರಾದ ರಾಮಪ್ಪ ಸಾಲ್ಯಾನ್, ಯಾದವ್ ಅಮೀನ್ ಉಪಸ್ಥಿತರಿದ್ದರು




