ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿರುವ ಸೌದಿ ಬಿಲ್ಲವಾಸ್ ಸಂಘದ ವಾರ್ಷಿಕ ಮಹಾಸಭೆಯು ಶುಕ್ರವಾರ ಜುಬೈಲ್‌ನ ಪುಳಿ ರೆಸ್ಟೊರೇಂಟ್‌ನ ಪ್ಲೆಕ್ಸೊನ್ ಆಡಿಟೋರಿಯಂನಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖ್ಯಾತ ಯಕ್ಷಗಾನ ಭಾಗವತರಾದ ಶ್ರೀ ರೋಶನ್ ಕೋಟ್ಯಾನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಸಭೆ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಶ್ರೀ ರೋಶನ್ ಕೋಟ್ಯಾನ್ ವಾರ್ಷಿಕ ವರದಿ ವಾಚಿಸಿದರೆ, ಖಜಾಂಚಿ ಶ್ರೀ ಹರೀಶ್ ಪೂಜಾರಿ ತೋನ್ಸೆ ಲೆಕ್ಕಪತ್ರ ಮಂಡಿಸಿದರು. ಬಳಿಕ ವರದಿ ಹಾಗೂ ಲೆಕ್ಕಪತ್ರಗಳ ಕುರಿತು ಚರ್ಚೆ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.
ಸಂಘದ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಪೂಜಾರಿ ಅವರು ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ರಚನೆ ಕಾರ್ಯವನ್ನು ನಿರ್ವಹಿಸಿ ಸಭೆಯನ್ನುದ್ದೇಶಿಸಿ ಶುಭ ಹಾರೈಸಿದರು. ಇನ್ನೋರ್ವ ಗೌರವಾಧ್ಯಕ್ಷ ಹಾಗೂ ಯುವ ಉದ್ಯಮಿ ಶ್ರೀ ಯೋಗೇಶ್ ಪೂಜಾರಿ ಕಟಪಾಡಿ ಅವರು ನೂತನ ಸಮಿತಿಗೆ ಮಾರ್ಗದರ್ಶನ ಹಾಗೂ ಶುಭಾಶಯಗಳನ್ನು ತಿಳಿಸಿದರು.

ಅಧ್ಯಕ್ಷ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ಅವರು 2026-27ನೇ ಸಾಲಿನ ಕಾರ್ಯಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಸಂಘದ ಕಾರ್ಯಚಟುವಟಿಕೆಗಳ ಮಹತ್ವವನ್ನು ವಿವರಿಸಿದರು.
ಸಭೆಯ ಬಳಿಕ ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ರಾಫಲ್ ಟಿಕೆಟ್ ಡ್ರಾವನ್ನು ಶ್ರೀ ಮನೋಹರ ಅಮೀನ್ ಹಾಗೂ ಶ್ರೀ ದಕ್ಷಯ್ ಪೂಜಾರಿ ನಡೆಸಿಕೊಟ್ಟರು.
ಸಂಘದ ಚಟುವಟಿಕೆಗಳ ಪ್ರಸ್ತುತಿಯನ್ನು ಶ್ರೀ ಪ್ರವೀಣ್ ಪೂಜಾರಿ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿದರು. ಸಹ ಕಾರ್ಯದರ್ಶಿ ಶ್ರೀ ರಾಜೇಶ್ ತೋನ್ಸೆ ವಂದಿಸಿದರು. ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿ ಹಾಗೂ ಸಂಯೋಜಕಿ ಶ್ರೀಮತಿ ಚೇತನ ಎಸ್. ಪೂಜಾರಿ ನಿರೂಪಿಸಿದರು.

2026-27ನೇ ಸಾಲಿನ ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷರು: ಶ್ರೀ ಸದಾಶಿವ ಪೂಜಾರಿ, ಶ್ರೀ ಯೋಗೇಶ್ ಪೂಜಾರಿ ಕಟಪಾಡಿ
ಅಧ್ಯಕ್ಷರು: ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್
ಉಪಾಧ್ಯಕ್ಷರು: ಶ್ರೀ ವಿಶ್ವನಾಥ್ ಸುವರ್ಣ, ಶ್ರೀ ಸುಂದರದಾಸ್ ಪೂಜಾರಿ
ಪ್ರಧಾನ ಕಾರ್ಯದರ್ಶಿ: ಶ್ರೀ ರೋಶನ್ ಕೋಟ್ಯಾನ್
ಸಹ ಕಾರ್ಯದರ್ಶಿಗಳು: ಶ್ರೀ ರಾಜೇಶ್ ತೋನ್ಸೆ, ಶ್ರೀ ಮನೋಹರ ಅಮೀನ್
ಖಜಾಂಚಿ: ಶ್ರೀ ಹರೀಶ್ ಪೂಜಾರಿ ತೋನ್ಸೆ
ಸಹ ಖಜಾಂಚಿ: ಶ್ರೀಮತಿ ಪ್ರೀತ ಎ. ಬಂಗೇರ
ಮುಖ್ಯ ಸಂಯೋಜಕಿ: ಶ್ರೀಮತಿ ಚೇತನ ಎಸ್. ಪೂಜಾರಿ
ಸಹ ಸಂಯೋಜಕ: ಶ್ರೀ ಅಜೀತ್ ಸನಿಲ್ ಕಟಪಾಡಿ
ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀ ಯಶವಂತ್ ಸನಿಲ್
ಸಹ ಸಾಂಸ್ಕೃತಿಕ ಕಾರ್ಯದರ್ಶಿಗಳು: ಶ್ರೀ ಸಂದೀಪ್ ಬಜಾಲ್, ಶ್ರೀ ದಕ್ಷಯ್ ಪೂಜಾರಿ
ಕ್ರೀಡಾ ಕಾರ್ಯದರ್ಶಿ: ಶ್ರೀ ದೇವಾಂಗ್ ಸುವರ್ಣ
ಸಹ ಕ್ರೀಡಾ ಕಾರ್ಯದರ್ಶಿಗಳು: ಶ್ರೀ ಗಣೇಶ್ ಪಾಲನ್, ಶ್ರೀ ಪ್ರಮೋದ್ ಪೂಜಾರಿ
ಮಾಧ್ಯಮ ಸಮಿತಿ ಮುಖ್ಯಸ್ಥರು: ಶ್ರೀ ಪುಷ್ಪರಾಜ್ ಪೂಜಾರಿ ಗಡಿಯಾರ್
ಸಭೆಯಲ್ಲಿ ಸಂಘದ ಹಿರಿಯರು, ಸದಸ್ಯರು ಹಾಗೂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




