Home Latest ಹಂದಾಡಿ: ಮಕ್ಕಿಮನೆ ಲಕ್ಷ್ಮೀ ಪೂಜಾರ್ತಿ ನಿಧನ…!!

ಹಂದಾಡಿ: ಮಕ್ಕಿಮನೆ ಲಕ್ಷ್ಮೀ ಪೂಜಾರ್ತಿ ನಿಧನ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಹಂದಾಡಿ ಗ್ರಾಮದ ಮಕ್ಕಿಮನೆ ನಿವಾಸಿ ಲಕ್ಷ್ಮೀ ಪೂಜಾರ್ತಿ (88) ಅವರು ಅನಾರೋಗ್ಯದಿಂದ ಅ.22 ರಂದು ಸ್ವಗೃಹದಲ್ಲಿ ನಿಧನರಾದರು.

ದಿವಂಗತ ಮಂಜಪ್ಪ ಪೂಜಾರಿ ಅವರ ಪತ್ನಿಯಾಗಿರುವ ಇವರು ಗೃಹಿಣಿಯಾಗಿದ್ದರು. ಮೃತರು ಉಡುಪಿ ಜಿಲ್ಲಾ ಜಯ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನ ಪಡೆದು ಜಯ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷ ಲೂವಿಸ್ ಎಂ., ನಿತ್ಯಾನಂದ್, ಪದಾಧಿಕಾರಿಗಳು, ಕಾನೂನು ಸಲಹೆಗಾರರು, ಸದಸ್ಯರು, ಉಡುಪಿ ‌ನಗರ ಸಭೆ ಸದಸ್ಯ ವಿಜಯ್ ಪೂಜಾರಿ ಬೈಲೂರು,ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಂಕರ ಪೂಜಾರಿ, ಉಡುಪಿ ನಗರಸಭಾ ಮಾಜಿ ಸದಸ್ಯ ಎಸ್.ಎಸ್. ತೋನ್ಸೆ, ರೂಪೇಶ್ ಕಲ್ಮಾಡಿ ಹಾಗೂ ವಾಸು ಕಾಂಚನ್ ‌ಕಲ್ಮಾಡಿ ಮತ್ತು ಮೊದಲಾದವರು ಅಂತಿಮ ನಮನ ಸಲ್ಲಿಸಿದರು.