ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಅಂಬೇಡಕಲ್ಲು ದರ್ಖಾಸು ನಿವಾಸಿ ಅಶ್ವಿತಾ (35) ಅವರ ಪತಿ ವಿನಯ್ ಶೆಟ್ಟಿ (39) ನಾಪತ್ತೆಯಾಗಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿನಯ್ ಶೆಟ್ಟಿ ಅವರು ದೊಂಡೆರಂಗಡಿಯಲ್ಲಿರುವ ತಮ್ಮ ಅಣ್ಣ ರಾಜೇಶ್ ಶೆಟ್ಟಿ ಅವರ ಮನೆಗೆ ಹೋಗಿದ್ದರು. ಅ.21 ರಂದು ಅಣ್ಣ-ಅತ್ತಿಗೆ ಕೆಲಸಕ್ಕೆ ಹೋದ ಬಳಿಕ ಮನೆ ಬಿಟ್ಟು ಹೋದ ವಿನಯ್, ನಂತರ ಮನೆಗೆ ವಾಪಸ್ ಬಂದಿಲ್ಲ.
ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆ ಎಂದು ಪ್ರಕರಣ ದಾಖಲಿಸಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.



